ಚಿಂದಿ ಚಿತ್ರಾನ್ನ
![]() |
ಚಿಂದಿ ಚಿತ್ರಾನ್ನ |
ಹಾಸ್ಟೆಲ್ ಒಂದ್ರಲ್ಲಿ ಪ್ರತಿದಿನ ಚಿತ್ರಾನ್ನಾನೇ ತಿಂದು ತಿಂದು ಬೇಜಾರಾಗಿ 80 ವಿದ್ಯಾರ್ಥಿಗಳು ಹಾಸ್ಟೆಲ್ ವಾರ್ಡನ್ಗೆ ಪ್ರತಿದಿನವೂ ಬೇರೆ ಬೇರೆ ಥರದ್ ಟಿಫನ್ ಮಾಡೋಕೆ ಹೇಳದ್ರು.
ಆದರೆ 100 ರಲ್ಲಿ 20 ಜನರಿಗೆ ಮಾತ್ರ ಪ್ರತಿದಿನ ಚಿತ್ರಾನ್ನಾನೇ ಬೇಕಾಗಿತ್ತು, ಆದರೆ ಉಳಿದ 80 ಜನಕ್ಕೆ ಅದು ಬೇಕಾಗಿರಲಿಲ್ಲ. ಅವರಿಗೆ ಬಗೆಬಗೆಯ ಉಪಹಾರ ಬೇಕಾಗಿತ್ತು.
ಆಗ ವಾರ್ಡನ್ ವೋಟಿಂಗ್ ಮಾಡೋಣ, ಯಾರ ಪರವಾಗಿ ಹೆಚ್ಚು ವೋಟ್ ಬರುತ್ತೋ ಅದೇ ಮಾಡೋಣಾಂತ ತೀರ್ಮಾನಿಸಿದರು.
ಯಾವ 20 ವಿದ್ಯಾರ್ಥಿಗಳಿಗೆ ಚಿತ್ರಾನ್ನ ಇಷ್ಟ ಇತ್ತೋ ಅವರು ಚಿತ್ರಾನ್ನಕ್ಕೇ ವೋಟ್ ಹಾಕಿದ್ರು.
ಉಳಿದ 80 ಜನ ವಿದ್ಯಾರ್ಥಿಗಳು ಮಾತ್ರ ಒಂಚೂರೂ ಯೋಚನೆ ಮಾಡದೆ ತಮಗಿಷ್ಟವಾದ ಉಪಹಾರಗಳ ಬಗ್ಗೆ ಜಗಳವಾಡೋಕೆ ಶುರು ಮಾಡದ್ರು. ತಮ್ಮ ಬುದ್ದಿ, ವಿವೇಚನೆಗೆ ಕೆಲಸ ಕೊಡಲೇ ಇಲ್ಲ.. ತಮಗಿಷ್ಟವಾಗೋ ಉಪಹಾರಗಳಿಗೆ ವೋಟ್ ಮಾಡೋಕೆ ಶುರು ಮಾಡದ್ರು
ಈಗ ಯೋಚನೆ ಮಾಡಿ ಏನಾಗಿರಬಹುದೂಂತ?
ಆ ಹಾಸ್ಟೆಲ್ಲಿನ ಕ್ಯಾಂಟಿನ್ ನಲ್ಲಿ ಈಗಲೂ ಆ 80 ವಿದ್ಯಾರ್ಥಿಗಳಿಗೆ ಚಿತ್ರಾನ್ನಾನೇ ಗತಿಯಾಗಿದೆ. ಯಾಕಂದ್ರೆ ಉಳಿದ ಆ 20 ವಿದ್ಯಾರ್ಥಿಗಳು ಒಗ್ಗಟ್ಟಾಗಿದ್ರು.
ಪಾಠ: ಎಲ್ಲಿಯವರೆಗೆ 80% ಜನ ಮತ್ತೊಂದು ದಿಕ್ಕಿನಲ್ಲಿ ದಿಕ್ಕಾಪಾಲಾಗಿರ್ತೀರೋ ಅಲ್ಲಿವರೆಗೂ 20% ಜನಗಳದ್ದೇ ಆಟ ನಡಿಯತ್ತೆ
ಹಿಂದುಗಳೆಲ್ಲ ಒಗ್ಗಟ್ಟಾಗಿ, ಉತ್ತಮರಾಗಿ, ಶಿಕ್ಷಿತರಾಗಿ, ಸಂಘಟಿತರಾಗಿ ಇಲ್ಲಾಂದ್ರೆ ಚಿತ್ರಾನ್ನಾನೇ ಆಗ್ತೀರ.