ಮೂರು ತಿಂಗಳು ಸಾತ್ವಿಕ ಭೋಜನ ಮಾಡಿ ನೋಡಿ , ಸಾತ್ವಿಕ ಭೋಜನ ಅಂದರೆ ಕೇವಲ ಶಾಕಾಹಾರಿ ಅಲ್ಲ, ದೇವರಿಗೆ ಸಮರ್ಪಿಸಿದ ಅನ್ನ.
ನಿಮ್ಮ ದೇಹದಲ್ಲಿ ಆಗುವ ಪರಿವರ್ತನೆ ಗಮನಿಸಿ , ಏರಡೂ ಶಾರೀರಿಕ ಮತ್ತು ಮಾನಸಿಕ ಬದಲಾವಣೆ ಮಾಡುತ್ತದೆ.
ನಾವು ಸಿಟ್ಟಿನ ಭರದಲ್ಲಿ ಮಾಡಿದ ಅಡಿಗೆಗೆ ಸಾತ್ವಿಕ ಅಡಿಗೆ ಅನ್ನುವುದಿಲ್ಲ. ಹಾಗೇ ಅಡಿಗೆ ಮಾಡುವಾಗ ಯಾರ ಮೇಲೂ ಸಿಟ್ಟು ಮಾಡುವದು, ಚೀರಾಡುವದು ಮಾಡುವದು ಸರಿಯಲ್ಲ ಇದು ಈಗ ಸಹಜವಾಗಿದೆ.
ಏಕೆಂದರೆ ನಾವು ಸಿಟ್ಟಿನ ಭರದಲ್ಲಿ ಮಾಡಿದ ಅಡುಗೆಗೆ ನಕಾರಾತ್ಮಕ ಕಂಪನ ಹೊಗುವದು ಸಹಜ.
ನೆನಪಿಡಿ ನಾವು ಅದನ್ನೇ ಉಣ್ಣುವುದು.ಅದಕ್ಕೆ ನಮ್ಮ ಹಿಂದೂ ಧರ್ಮದ ಆಚರಣೆಗಳಲ್ಲಿ ಸ್ನಾನ ಮಾಡಿ, ಶುಭ್ರ ವಸ್ತ್ರ ಧರಿಸಿ ದೇವರ ನಾಮಸ್ಮರಣೆ ಮಾಡುತ್ತಾ ಅಡಿಗೆ ಮಾಡುವ ಸಂಪ್ರದಾಯ ಇಂದಿಗೂ ಗುಡಿ , ಮಠ , ದಾಸೋಹ ಗಳಲ್ಲಿ ಕಾಣುವುದುಂಟು.
3 ತರಹದಲ್ಲಿ ಅಡುಗೆ ಊಟ ಇರುತ್ತೆ.
1.ಮನೆಯಲ್ಲಿ ತಾಯೀ, ಪತ್ನಿ ಮಾಡುವ ಅಡಿಗೆ, ಊಟ.
2.ಮಂದಿರ, ಮಠಗಳಲ್ಲಿ ಮಾಡುವ ಅಡಿಗೆ, ಊಟ.*
3. ಹೋಟೆಲ್ ಪಾರ್ಟಿಗಳಲ್ಲಿನ ಊಟ.
ಈ ಮೂರು ಪ್ರಕಾರದ ಊಟದಲ್ಲಿ ಬೇರೆ ಬೇರೆ ತರಹದ ಸ್ಪಂದನೆಗಳು ಇರುತ್ತವೆ.
ಊಟದ ಪ್ರಭಾವ ಜೀವನದ ಮೇಲೆ |
ಹೋಟೆಲ್ ಊಟ...
ಇಲ್ಲಿ ಯಾವುದೇ ರೀತಿಯ ಸಕಾರಾತ್ಮಕ ಕಂಪನ ಇರುವುದಿಲ್ಲ.
ಕೇವಲ ದುಡ್ಡಿಗಾಗಿ , ಸ್ವಾರ್ಥಕ್ಕಾಗಿ ಮಾಡಿದ ಅಡಿಗೆ ಅದು, ಯಾರು ಅಡಿಗೆ ಮಾಡುತ್ತಾರೋ, ಅವರ ಮನಸ್ಸಿನ ಸ್ಪಂದನೆಗಳು ಯಾವ ತರಹ ಇರುತ್ತದೋ ಗೊತ್ತಿಲ್ಲ,
ಅವರ ಮನಸ್ಸಿನ ಸ್ಪಂದನೆಗಳು ಅವರು ಮಾಡಿದ ಅಡಿಗೆಯಲ್ಲಿ ಇಳಿಯುತ್ತವೆ.
ಮನೆಯಲ್ಲಿ ತಾಯಿ, ಅಥವಾ ಪತ್ನಿ ಮಾಡುವ ಅಡಿಗೆ...
ಮನೆಯಲ್ಲಿ ಮಾಡುವ ಅಡಿಗೆಯಲ್ಲಿ ಪ್ರೀತಿ, ಅಂತಃಕರಣ ಇರುತ್ತದೆ ಅಂದರೆ ಸಕಾರಾತ್ಮಕ ಸ್ಪಂದನೆಗಳು ಇರುವ ಅಡಿಗೆ.
ಆದರೆ ಇತ್ತೀಚಿಗೆ ಮನೆಯಲ್ಲಿ ಅಡಿಗೆ ಕೆಲಸದವಳು ಅಡಿಗೆ ಮಾಡುವ ಫ್ಯಾಶನ್ ಆಗಿದೆ. ಮನೆಯಲ್ಲಿ ಒಂದಿಬ್ಬರೆ ಇದ್ದರೂ,ಅಡಿಗೆ ಮಾಡುವುದು ಅಡಿಗೆ ಕೆಲಸದವಳೆ , ಅವಳ ಮನಸ್ಸು ಯಾವ ತರಹ ಇದೆ, ಅವಳು ದುಡ್ಡಿಗೆ ಮಾತ್ರ ಅಡಿಗೆ ಮಾಡುವಳು.
ಅಲ್ಲಿಯೂ ನಕಾರಾತ್ಮಕ ಕಂಪನ ಇರುವುದು, ಆದರೆ ಈ ಅಡಿಗೆ ನಾಲಿಗೆಗೆ ರುಚಿ ಆದರೂ ದೇಹಕ್ಕೆ ಒಳ್ಳೆಯದಲ್ಲ.
ಸ್ವಲ್ಪ ವಿಚಾರ ಮಾಡಿ ನೋಡಿ.
ನಿಮ್ಮ ಮನೆಯ ಅಜ್ಜಿ , ತಾಯೀ ಮಾಡಿದ ಅಡಿಗೆ ಮತ್ತು ಕೆಲಸದವಳು ಮಾಡುವ ಅಡಿಗೆಗೆ ಎಷ್ಟು ವ್ಯತ್ಯಾಸ ?
ತಾಯಿ ಅಡಿಗೆ ಮಾಡುವಾಗ ಮಗ ಒಂದು ರೊಟ್ಟಿ , ಅಥವಾ ಚಪಾತಿ ಹೆಚ್ಚು ಕೇಳಿದರೆ ತಾಯಿಗೆ ಇನ್ನೂ ಹೆಚ್ಚು ಆನಂದ ಆಗುವುದು ಸಹಜ, ಅದೇ ಅಡುಗೆ ಅವಳಿಗೆ ಒಂದೆರಡು ಹೆಚ್ಚು ರೊಟ್ಟಿ, ಚಪಾತಿ ಮಾಡಲು ಹೇಳಿ ನೋಡಿ, ಅವಳ ಮುಖದಲ್ಲಿ ಕಾಣುವ ಒಂದು ತರಹದ ವ್ಯತ್ಯಾಸ.
ಮಂದಿರ ಮಠಗಳಲ್ಲಿನ ಅಡಿಗೆ...
ಅದು ದೇವರಿಗೆ ನೈವೇದ್ಯ ಅರ್ಪಿಸಿ , ನಮಗೆ ಬಡಿಸುವ ಅಡಿಗೆ, ಅದು ನಾವು ಉಣ್ಣುವುದು ಪ್ರಸಾದ ರೂಪದಲ್ಲಿ, ಅಲ್ಲಿ ಮಾಡುವ ಅಡಿಗೆಯಲ್ಲಿ ಪಾಸಿಟಿವ್ ಸಕಾರಾತ್ಮಕ ಕಂಪನ ತುಂಬಿ ತುಳುಕುತ್ತಿರುತ್ತದೆ.
ಆದಕಾರಣ ನಾವು ಮಾಡುವ ಅಡಿಗೆ ದೇವರಿಗೆ ಸಮರ್ಪಿಸಿ , .
ಅದರ ಸ್ವಲ್ಪ ಭಾಗ ಬಡವರಿಗೆ ಸಮರ್ಪಿಸಿ ನಾವು ಸೇವಿಸುವುದು ಉತ್ತಮ.
ಹಿಂದಿನ ದಿನಗಳಲ್ಲಿ, ಪ್ರತಿಯೊಂದು ಮನೆಯ ಮೊದಲನೆಯ ರೊಟ್ಟಿ ಮಂದಿರ, ಬಡಬಗ್ಗರು , ನಿರ್ಗತಿಕರು, ಮಠಕ್ಕೆ ಅರ್ಪಿಸಿ, ಸೇವಿಸುವ ಪದ್ಧತಿ ಇತ್ತು, ಈಗಲೂ ಕೆಲವು ಹಳ್ಳಿಗಳಲ್ಲಿ ಈ ಪದ್ಧತಿ ಇದೆ,
ನಮ್ಮ ಅಜ್ಜಿ, ನಮ್ಮ ತಾಯೀ ಪ್ರತಿ ದಿನವೂ ಸ್ವಲ್ಪ ಭಾಗದ ಅಡಿಗೆ ಆಕಳಿಗೆ ಗೋಗ್ರಾಸ ಎಂದು ಕೊಡುವುದನ್ನು ನಾನು ಸಣ್ಣವನಿದ್ದಾಗ ನೋಡಿದ ನೆನಪಿದೆ.
ಅನ್ನದಲ್ಲಿ ಜಾದು ಇದೆ. ಅಡಿಗೆ ಮಾಡುವವರಲ್ಲಿ ಒಳ್ಳೆಯ ಸಂಸ್ಕಾರವಿದೆ. ಮತ್ತು ಅಡಿಗೆ ಮಾಡುವಾಗ ದೇವರ ನಾಮ ಸ್ಮರಣೆ ಮಾಡುತ್ತಾ ಅಡಿಗೆ ಆದ ಮೇಲೆ ದೇವರಿಗೆ ಸಮರ್ಪಿಸಿ ಊಟ ಮಾಡಿ ನೋಡಿ.
3 ತಿಂಗಳು ಇದನ್ನು ಮಾಡಿ ನೋಡಿ.
ನಿಮ್ಮಲ್ಲಿ ಆಗುವ ಬದಲಾವಣೆಗಳನ್ನು ನೀವೆ ನೋಡಿರಿ.
Post a Comment