Search This Blog

  • ()

Subcribe

Enter your email address:

Delivered by FeedBurner

The Most/Recent Articles

Showing posts with label mom is wow. Show all posts
Showing posts with label mom is wow. Show all posts

*"ಉಪ್ಪಿಗಿಂತ ರುಚಿಯಿಲ್ಲ; ತಾಯಿಗಿಂತ ಬಂಧುವಿಲ್ಲ."*

Mom is Wow
 

"ಯತ್ರ ನಾರ್ಯಸ್ತು ಪೂಜ್ಯಂತೇ ರಮಂತೇ ತತ್ರ ದೇವತಾಃ."


ಎಲ್ಲಿ ನಾರಿಯರನ್ನು ಪೂಜಿಸಲಾಗುತ್ತದೆಯೋ ಅಲ್ಲಿ ದೇವತೆಗಳು ವಾಸಿಸುತ್ತಾರೆ‌ ಎಂಬುದು ಅರ್ಥ.

"ಇದಂ ಮಂತ್ರಂ ಪತ್ನೀ ಪಠೇತ್."
ಈಮಂತ್ರವನ್ನು ಪತ್ನಿಯು ಪಠಿಸಲಿ.ಅಥವಾ ಉಚ್ಛರಿಸಲಿ .ಎಂಬುದು ತಾತ್ಪರ್ಯ.
ಈ ವಿಚಾರಗಳನ್ನು ನೋಡಿದಾಗ ನಾವು ತಿಳಿದುಕೊಳ್ಳುವ ವಿಚಾರವಿದು. ವೇದಗಳ ಕಾಲದಲ್ಲಿ ಮಹಿಳೆಗೆ ಉನ್ನತ ಸ್ಥಾನ ಮಾನವಿತ್ತು ಎಂದು.ಇದಕ್ಕೆ ಉದಾಹರಣೆಯಾಗಿ ನಮ್ಮೆದುರು ಗಾರ್ಗಿ ,ಮೈತ್ರೇಯಿಯರು ನಿಲ್ಲುತ್ತಾರೆ.

ನಾನೀಗ ಹೇಳ ಹೊರಟಿರುವುದು ನಮ್ಮ ಸಮಾಜದಲ್ಲಿ  ಮಹಿಳೆಯ ಸ್ಥಾನ ಮಾನವೇನು ಎಂಬ ಬಗ್ಗೆ.

ನಮ್ಮ ಸಮಾಜದಲ್ಲಿ ಹೆಣ್ಣು ಕಣ್ಣಾಗಿದ್ದಾಳೆ.ತಾಯಿ,ಅತ್ತೆ,ಮಗಳು,ಸೊಸೆ,ನಾದಿನಿ,ಅತ್ತಿಗೆಯಾಗಿ ಆಕೆ ನಿರ್ವಹಿಸುವ ಪಾತ್ರಗಳು ಹಲವಾರು.
 ಬನ್ನಿ,ತಾಯಿಯಾಗಿ ನಮ್ಮ ಮಹಿಳೆ ಹೇಗೆ ಕರ್ತವ್ಯ ಮುಖಿಯಾಗಿದ್ದಾಳೆ ಎಂಬ ವಿಚಾರವನ್ನು ಹಂಚಿಕೊಳ್ಳೋಣ.

ಮನೆಯೆ ಮೊದಲ ಪಾಠ ಶಾಲೆ ಜನನಿ ತಾನೆ ಮೊದಲ ಗುರುವು ಜನನಿಯಿಂದ ಪಾಠ ಕಲಿತ ಜನರು ಧನ್ಯರು.

ಒಂಭತ್ತು ತಿಂಗಳು ಒಡಲಲ್ಲಿ ಒಲವನ್ನು ಹೊತ್ತು,ಕಷ್ಟವನು ಇಷ್ಟವಾಗಿಸಿಕೊಂಡು,ಬೆಟ್ಟದಷ್ಟು ನೋವನ್ನುಂಡು ಪ್ರೀತಿಯಿಂದ ಜೀವವೊಂದನ್ನು ಬುವಿಗೆ ತರುತ್ತಾಳೆ.

ಜನಿಸಿದ ಅಸಹಾಯಕ ಜೀವಕ್ಕೆ ತಾಯಿಯೇ ದೇವರು.ತಾಯಿಯೇ ಅನ್ನ, ಆಹಾರ.ಮನೆಯೆನ್ನುವ ಪಾಠ ಶಾಲೆಯಲ್ಲಿ ಬಿಂಬವೊಂದು ರೂಪುಗೊಳ್ಳುತ್ತದೆ.ತಾಯಿಯೇ ಗುರುವಾಗುತ್ತಾಳೆ.

ಇದಕ್ಕೇ  ಇರಬೇಕು ಬಲ್ಲಿದರು ಹೇಳುವುದು.
"ಕುಪುತ್ರೋ ಜ್ಯಾಯೇತ್ ಕ್ವಚಿದಪಿ ಕುಮಾತಾ ನ ಭವತಿ"

ಹುಟ್ಟಿದರೆ ಕೆಟ್ಟ ಸಂತಾನ ಹುಟ್ಟಬಹುದಂತೆ. ಆದರೆ ತಾಯಿ ಎಂದೂ ಕೆಟ್ಟವಳು ಆಗಲಾರಳಂತೆ.
ಅಕ್ಷರಶಃ ಸತ್ಯ ಈ ಮಾತು.ಇದಕ್ಕೆ ಪುಷ್ಟಿ ಕೊಡುವ ಸಾಕಷ್ಟು ಪುರಾಣ ಪುಣ್ಯ ಕಥೆಗಳು ನಮ್ಮ ನಿಮ್ಮಗಳ ಕಣ್ಣೆದುರು ಇವೆ.  


 "ಹೆಣ್ಣೊಬ್ಬಳು ಕಲಿತರೆ ಶಾಲೆಯೊಂದು ತೆರೆದಂತೆ"

ಪ್ರಸಿದ್ದ ದಾರ್ಶನಿಕ ಮೈಕೈವರ್ ಮೇಲಿನ ಮಾತನ್ನು ಹೇಳುತ್ತಾನೆ. ಹೌದು ತಾಯಿ ಸುಶಿಕ್ಷಿತೆಯದರಷ್ಟೇ ಮನೆಯಲ್ಲಿ ಸುಶಿಕ್ಷಿತ ವಾತಾವರಣ ಸಿಗಬಹುದು.
ಜನಿಸಿದ ಮಕ್ಕಳು ಮೊದಲು ಕಾಣುವುದು, ಅನುಸರಿಸುವುದು ,ಅನುಕರಿಸುವುದು ತಾಯಿಯನ್ನೇ .ಅದಕ್ಕೇ ಮಕ್ಕಳ ಸ್ವಭಾವ ,ವರ್ತನೆ ಎಲ್ಲವೂ ಕೆಟ್ಟದ್ದಾಗಲಿ ಒಳ್ಳೆದೇ ಇರಲಿಬರುವ ಮಾತು ಹೀಗೆಯೇ. "ತಾಯಿಯಂತೆ ಮಗಳು ನೂಲಿನಂತೆ ಸೀರೆ"


"ತೊಟ್ಟಿಲಿನಿಂದ ಚಟ್ಟದವರೆಗೆ"
ಎನ್ನುವ ನಾಣ್ಣುಡಿ.ಹುಟ್ಟಿದ ಮಗುವೊಂದು ಬಾಲ್ಯದಲ್ಲಿ ಏನನ್ನು ಕಲಿಯುತ್ತದೋ ಅದು ಅದರ ಮಸ್ತಿಷ್ಕದಲ್ಲಿ ಮನೆ ಮಾಡುತ್ತದೆ.ಆದ್ದರಿಂದಲೇ ಮಗುವಿಗೆ ತಾಯಿ ಒಳ್ಳೆಯವಳಾದರೆ ಅತ್ಯುತ್ತಮ.


"ಜನ್ಮಣಾ ಜಾಯತೇ ಜಂತುಃ 
ಕರ್ಮಣಾ ಜಾಯತೇ ದ್ವಿಜಃ
ವೇದಾಧ್ಯಯನತೋ ವಿಪ್ರಃ
ಬ್ರಹ್ಮ ವಿ ಬ್ರಾಹ್ಮಣ ಸ್ಮೃತಃ"


ಒಂದು ಜೀವ ಭೂಮಿಯಲ್ಲಿ ಜನ್ಮ ಎತ್ತಿದಾ ಕ್ಷಣ  ಕೇವಲ ಉಸಿರಾಡುವ ಮಾಂಸದ ಬರೀ ಮುದ್ದೆಯಷ್ಟೆ. ಕಾಲ ಕ್ರಮೇಣವಾಗಿ ಆ ಮಗು ತಾಯಿಯ ಪ್ರೀತಿಯ ಆರೈಕೆಯಲ್ಲಿ ಹೊಸ ಸಂಚಲನ ಪಡೆದುಕೊಳ್ಳುತ್ತದೆ .ಮಲ ಮೂತ್ರದ ಕೂಪದಲ್ಲಿ ಉರುಳಾತ್ತಿರುವ ಆ ಜೀವವನ್ನು "ತಾಯಿ" ಎಂಬ ದೇವತೆ ಕ್ಷಣ ಕ್ಷಣದ ಸಂಸ್ಕಾರದ ಮೂಲಕ ಉಸಿರು ತುಂಬುತ್ತಾ ಜೀವದ, ಜೀವನದ ಹಸಿರಾಗುತ್ತಾಳೆ.
ಬಾಳ ಜ್ಯೋತಿಯನ್ನು ಉರಿಸುತ್ತಾಳೆ.ತನ್ಮೂಲಕ ಜೀವಕ್ಕೆ ಮಾನವನ ರೂಪ ನೀಡುತ್ತಾಳೆ.

ಸಂಸ್ಕಾರವನ್ನು ಪಡೆಯುತ್ತಾ ವೇದಾಧ್ಯಯನವನ್ನು ಮಾಡಿ ವಿಪ್ರನಾಗುತ್ತಾನೆ.ಬ್ರಹ್ಮ ಜ್ಜಾನವನ್ನು ಪಡೆದು ಬ್ರಾಹ್ಮಣನಾಗುತ್ತಾನೆ.

ಯೋಚಿಸಿ ಕವಿಮನಗಳೇ ಎಳೆಯ,ಆ ಅಸಹಾಯ ಕಂದಮ್ಮಗಳು ನಾವೇ ಅಲ್ಲವೇ ನಮ್ಮತಾಯಿ ತಾನೇ ನಮ್ಮನ್ನು ಈ ಸುಂದರ ಜಾಗದಲ್ಲಿ ಕೂರಿಸಿದ್ದು.ಅದಕ್ಕೆ ತಾಯಿಯನ್ನು "ಕ್ಷಮಯಾ ಧರಿತ್ರೀ ಎನ್ನುವುದು ಅಲ್ಲವೇ?


 *ಸಭ್ಯತೆ,ಸಂಸ್ಕೃತಿಯ ಹರಿಕಾರನಾಗಿ ತಾಯಿ.*

ಒಬ್ಬ ಯಶಸ್ವೀ ವ್ಯಕ್ತಿಯ ಹಿಂದೆ ತಾಯಿ ಇರುತ್ತಾಳೆ ಎಂಬ ಮಾತು ಸತ್ಯ.ಒಂದು ಭವ್ಯ ಕಟ್ಟಡ ದೃಢವಾಗಿ ನಿಲ್ಲ ಬೇಕಾದರೆ,ಭದ್ರ ಬುನಾದಿಯು,ಒಂದು ಗಿಡ ಬೆಳೆದು ಹೆಮ್ಮರವಾಗಲು ತಾಯಿ ಬೇರು ಹೇಗೆ ಪ್ರಾಮುಖ್ಯವೋ ಹಾಗೆಯೇ ಜೀವವೊಂದು ಉಜ್ವಲ ಭವಿಷ್ಯ ಕಾಣಲು,ದೇದೀಪ್ಯಮಾನವಾಗಿ ಬೆಳಗಲು ತಾಯಿಯೇ ಭದ್ರ ಬುನಾದಿ.


ಬೆಳಗ್ಗೆ ಏಳುತ್ತಿದ್ದ ಹಾಗೇ "ಕರಾಗ್ರೇ ವಸತೇ ಲಕ್ಷ್ಮೀಕರಮಧ್ಯೇ ಸರಸ್ವತಿ ಕರಮೂಲೇ ಸ್ಥಿತೋಗೌರಿ ಪ್ರಭಾತೇ ಕರದರ್ಶನಂ"


ಸಮುದ್ರ ವಸನೇದೇವಿ ಪರ್ವತ ಸ್ಥನ ಮಂಡಲೇ ವಿಷ್ಣು ಪತ್ನಿನಮಸ್ತುಭ್ಯಂ ಪಾದಸ್ಪರ್ಶಂ ಕ್ಷಮಸ್ವಮೇ."


ನಮ್ಮ ಅಮೃತ ಹಸ್ತಗಳಲ್ಲೇ ದೇವಾನು ದೇವತೆಗಳನ್ನು ಕಾಣುವ ನಮ್ಮಭವ್ಯ ಪರಂಪರೆ,ಸಭ್ಯ ಸಂಸ್ಕೃತಿ .ಮೆಟ್ಟುವ ಮೊದಲು ಭೂಮಿಯಲ್ಲೂ ಕ್ಷಮೆ ಕೇಳುವ ಹಿರಿಯ ಆದರೆ ಸರಳ ಶ್ರೇಷ್ಟ ಗುಣ.ಇವುಗಳನ್ನೆಲ್ಲಾ ತಾಯಿ ಕಲಿಸದಿದ್ದರೆ ಇನ್ನಾರು ಕಲಿಸುತ್ತಾರೆ..ಅದಕ್ಕೇ ಜನನಿ ಮೊದಲ ಗುರು.

ಹೆಜ್ಜೆ ಹೆಜ್ಜೆಗೆ ಸಂಪ್ರದಾಯ ,ಸಭ್ಯತೆ,ಸಂಸ್ಕೃತಿಯ ಬಗ್ಗೆ ತಿದ್ದಿ ತೀಡುವತಾಯಿಯ ಪ್ರಾಮುಖ್ಯತೆಯ ಅರಿವು ಎಂದು ಆಗುವುದೋ.....

ಇಂಥಾ ತಾಯಿಯನ್ನೂವೃದ್ಧಾಶ್ರಮಕ್ಕೆ ತಳ್ಳುವವರಿಲ್ಲವೇ??!!
ಅವರ ಆಸ್ತಿಯನ್ನು ವಂಚನೆಯಿಂದ ಲಪಟಾಯಿಸಿ ಬೀದಿ ಪಾಲು ಮಾಡುವುದಿಲ್ಲವೇ??!!ಏಕೆ ಹೀಗೆ  ??
ನಮ್ಮ ಸಮಾಜದಲ್ಲಿಪರಿವರ್ತನೆ ಅಸಾಧ್ಯವೇ??ನಾವು ನೈತಿಕ ಅಧಃಪತನದತ್ತ ಸಾಗುತ್ತಿದ್ದೇವೆಯೇ ??ನಮ್ಮನ್ನು ನಾವು ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಸಮಯವಿದು ಅಲ್ಲವೇ?!
ತಾಯಿಯಾಗಿ ಕರ್ತವ್ಯ ನಿರ್ವಹಿಸುವಲ್ಲಿ ಏನು ಕೊರತೆ,ಹಿನ್ನಡೆ ಹಾಗೂ ಎಡವುತ್ತಿದ್ದೇವೆ  ಎಂಬ ಬಗ್ಗೆ ಅವಲೋಕನ ಮಾಡಬೇಕಾಗಿದೆ ಯೇ?? ತಾಯಿಯಾದವಳು ಮಗು ಗಂಡಾಗಲಿ ಹೆಣ್ಣಾಗಲಿ ಸಮಾನವಾಗಿ ಕಂಡು ಸರಿಯಾದ ರೀತಿಯಲ್ಲಿ ನೈತಿಕತೆಯ ಪಾಠ ನೀಡಬೇಕಾಗಿದೆಯೇ??ತನ್ಮೂಲಕ ನೈತಿಕ ಅಧಃಪತನದತ್ತ ಸಾಗುತ್ತಿರುವ ಒಂದು ಯುವ ಸಮೂಹಕ್ಕೆ ಮಾರ್ಗದರ್ಶನ  ನೀಡುವತ್ತ ಗಮನ ಹರಿಸಬೇಕಾಗಿದೆಯೆ??!

 ಹೆಣ್ಣು ತಾಯಿಯ ರೂಪದಲ್ಲಿ, ಗುರುವಾಗಿ,ಸಭ್ಯತೆ, ಸಂಸ್ಕೃತಿಯ  ಹರಿಕಾರನಾಗಿ,ಭವಿಷ್ಯ ರೂಪಿಸುವಲ್ಲಿ,ಭವ್ಯ ಸಮಾಜ ನಿರ್ಮಾಣದಲ್ಲಿ ಸಮರ್ಥವಾಗಿ ತನ್ನ ಕರ್ತವ್ಯವನ್ನು ನಿರ್ವಹಿಸುತ್ತಿದ್ದಾಳೆಯೇ ?ಅಂಥಾ ತಾಯಿಗೆ ಒಂದು ಹಿಡಿಯಷ್ಟು ಪ್ರೀತಿಯನ್ನು ಮನಸಾರೆ ಹಂಚೋಣವೇ???!!!ತಾಯಿಗೆ ಪ್ರೀತಿಯನ್ನು ನೀಡಲು ಹೇಳುವ ಸಮಯ ಬಂತೆಂದರೆ ಎಂಥಾ ವಿಚಿತ್ರವಲ್ಲವೇ??    ಅಲ್ಲವೇ ಪ್ರೀತಿ ಎನ್ನುವುದು ವ್ಯಾಪಾರದ ಸರಕಾಗಿರುವುದು ವಿಪರ್ಯಾಸವಲ್ಲವೇ? 

ಅತಿ ಶೀಘ್ರವಾಗಿ ಎಚ್ಚೆತ್ತುಕೊಂಡು ಕಲಿತು  ಕಲಿಸುತ್ತಾ,ಬೆಳೆದು ಬೆಳೆಸುತ್ತಾ ಬದುಕಿ ಬಾಳೋಣ ಎನ್ನುತ್ತಾ  ವಿರಮಿಸುವೆ.


  *"ಉಪ್ಪಿಗಿಂತ ರುಚಿಯಿಲ್ಲ; ತಾಯಿಗಿಂತ ಬಂಧುವಿಲ್ಲ."*