Search This Blog

  • ()

Subcribe

Enter your email address:

Delivered by FeedBurner

ಅವಳೆಂದರೆ...

 ಅವಳೆಂದರೆ...

ಅವಳು ಸ್ವಲ್ಪ ಬಿನ್ನ
 ನನ್ನ ಹಾಗೇನೆ
ಹಾಗಾಗಿಯೇ ನಾನು ಅವಳೊಂದಿಗೆ ಭಾವನಾತ್ಮಕ ಬೆಸೆದಿರುವೆ...

ಅವಳು ನನ್ನೆಲ್ಲ ವಿಚಾರಗಳನ್ನು ಒಪ್ಪಬೇಕೆಂದಿಲ್ಲ ...
ನನ್ನೀ ಅನಿಸಿಕೆ ಅವಳಿಗೂ ಸಹಮತವಿದೆ...

ಅವಳು ಸ್ವಲ್ಪ ಮೂಡಿ ಅದೇ ನನಗಿಷ್ಟ
ಒಮ್ಮೊಮ್ಮೆ ಬಲು ಕಷ್ಟ...

ನನ್ನೆಲ್ಲ ಮಾತನ್ನು ಆಕೆ ಒಪ್ಪುವವಳಲ್ಲ...
ಒಪ್ಪಬೇಕೆಂದೂ ಇಲ್ಲ...

ಅವಳ ಮೊಗದ ಸೌಂದರ್ಯದಷ್ಟೇ ಅಂದದ ಮನಸ್ಸು ...
ಅವಳನ್ನು ಹೊಗಳುತ್ತೆನೆಂದರೆ
ಅದು ಪ್ರೀತಿ ಅಂತೂ ಅಲ್ಲ .

ಅವಳೆಂದರೆ

ಮತ್ತೆ ಮತ್ತೆ  ಅವಳನ್ನು ಕಾಣಬೇಕು ಎನ್ನುವ 
ಕತುರತೆಯು ಸುಳ್ಳಲ್ಲ ...

ಸಹವಾಸ ಮತ್ತು ಪ್ರೀತಿ 
ಪ್ರೀತಿ ಮತ್ತು ಕನಸು , ಕನಸು ಮತ್ತು ಕವಿತೆ
ಅವಳನ್ನಲಂಕರಿಸುವ ಆಭರಣ...

ಅವಳನ್ನು ಹೊಗಳುವ
ಶೃಂಗಾರದ ಪದಗಳಿಂದಲೇ
ನಾನಿಂದು ಕವಿಯಾಗಿರುವೆ...

ಏನಾದರೂ ಬರೆಯುವ ಮುನ್ನ ಪ್ರತ್ಯಕ್ಷ ಅಪ್ರತ್ಯಕ್ಷವಾಗಿ 
ಅವಳನ್ನೊಮ್ಮೆ ಭೇಟಿಯಾಗುವೆ
ಅವಲಿಗರಿವಾಗದಂತೆ...

ಈಗೀಗ ಅವಳನ್ನು ನಿತ್ಯ ಕಾಣುವಾಸೆ
ಯಾಕೆ ಹೀಗೆ...?

ಅವಳ ಅಂತರಂಗವ ನಾನರಿಯೆ ...
ನನ್ನ ಮನದ ಮಾತನ್ನು ಅರುಹದಾದೆ ...

ಅವಲಿರಲಿ ಅವಲಿರುವಂತೆ ...
ಕಾರಣ ಅವಳು ಎಲ್ಲರಂತಲ್ಲ 
ಅವಳು ನನ್ನ ಹಾಗೆನೇ
ಸ್ವಲ್ಪ ಭಿನ್ನ ...

Post a Comment