Search This Blog

  • ()

ಸಂಕ್ರಾಂತಿ ಹಬ್ಬದ ಮಹತ್ವ ನಿಮಗೆ ತಿಳಿದಿರಲಿ

Sankranti *ನನ್ನ ಎಲ್ಲಾ ಬಂಧು ಮಿತ್ರರಿಗೆ ಮಕರ ಸಂಕ್ರಾಂತಿಯ ಶುಭಾಶಯಗಳು* *ಮಕರ ಸಂಕ್ರಾಂತಿಯ ಬಗ್ಗೆ ಸ್ವಲ್ಪ* *ಮಾಹಿತಿ ನಿಮಗಾಗಿ ಓದಿ....* *ಮಕರ ಸಂಕ್ರಾಂತಿ* *ಸಂಕ...

Subcribe

Enter your email address:

Delivered by FeedBurner

This Week's/Trending Posts

Hand-Picked/Curated Posts

Most Popular/Fun & Sports

Hand-Picked/Weekly News

The Most/Recent Articles

ಸಂಕ್ರಾಂತಿ ಹಬ್ಬದ ಮಹತ್ವ ನಿಮಗೆ ತಿಳಿದಿರಲಿ

Sankranti


*ನನ್ನ ಎಲ್ಲಾ ಬಂಧು ಮಿತ್ರರಿಗೆ ಮಕರ ಸಂಕ್ರಾಂತಿಯ ಶುಭಾಶಯಗಳು*

*ಮಕರ ಸಂಕ್ರಾಂತಿಯ ಬಗ್ಗೆ ಸ್ವಲ್ಪ* *ಮಾಹಿತಿ ನಿಮಗಾಗಿ ಓದಿ....*

*ಮಕರ ಸಂಕ್ರಾಂತಿ*

*ಸಂಕ್ರಾಂತಿ*

*ತಿಥಿ*


*ಈ ಹಬ್ಬವು ತಿಥಿವಾಚಕವಾಗಿರದೇ ಅಯನ-ವಾಚಕವಾಗಿದೆ. ಈ ದಿನ ಸೂರ್ಯನ ನಿರಯನ ಮಕರ ರಾಶಿಯಲ್ಲಿ ಸಂಕ್ರಮಣವಾಗುತ್ತದೆ. ಸೂರ್ಯನ ಭ್ರಮಣದಿಂದಾಗಿ ಆಗುವ ಕಾಲ ವ್ಯತ್ಯಾಸವನ್ನು ಸರಿಪಡಿಸಲು ಪ್ರತಿ ೮೦ ವರ್ಷಕ್ಕೊಮ್ಮೆ ಸಂಕ್ರಾಂತಿಯನ್ನು ೧ ದಿನ ಮುಂದೂಡಲಾಗುತ್ತದೆ.*

*ಇತ್ತೀಚೆಗೆ ಮಕರ ಸಂಕ್ರಾಂತಿ ಯು ಜನವರಿ ೧೪/೧೫  ಕ್ಕೆ ಬರುತ್ತದೆ.*

*ಇತಿಹಾಸ*

*ಸಂಕ್ರಾಂತಿ ಯನ್ನು ದೇವತೆ ಎಂದು ನಂಬಲಾಗಿದೆ. ಸಂಕ್ರಾಂತಿ ಯು ಸಂಕರಾಸುರನೆಂಬ ದೈತ್ಯನ ವಧೆ ಮಾಡಿದ್ದಾಳೆ ಎಂಬ ಕಥೆಯಿದೆ.*

*ಸಂಕ್ರಾಂತಿಯ ಮಹತ್ವ*

*ಈ ದಿನ ಪಂಚಾಗದ ನಿರಯನ ಪದ್ಧತಿಗನುಸಾರ ಸೂರ್ಯನ ಉತ್ತರಾಯಣ ಪ್ರಾರಂಭವಾಗುತ್ತದೆ.* *ಕರ್ಕಸಂಕ್ರಾಂತಿಯಿಂದ ಮಕರಸಂಕ್ರಾಂತಿಯ ವರೆಗಿನ ಕಾಲವನ್ನು 'ದಕ್ಷಿಣಾಯನ' ಎನ್ನುತ್ತಾರೆ.*

*ದಕ್ಷಿಣಾಯನ ಕಾಲದಲ್ಲಿ ಮೃತನಾದ ವ್ಯಕ್ತಿಯು, ಉತ್ತರಾಯಣದಲ್ಲಿ ಮೃತನಾದ ವ್ಯಕ್ತಿಗಿಂತ ದಕ್ಷಿಣಲೋಕಕ್ಕೆ (ಯಮಲೋಕಕ್ಕೆ) ಹೋಗುವ ಸಾಧ್ಯತೆ ಹೆಚ್ಚಿರುತ್ತದೆ.*

*ಸಾಧನೆಯ ದೃಷ್ಟಿಯಿಂದ ಮಹತ್ವ*

*ಈ ದಿನ ಪಂಚಾಗದ ನಿರಯನ ಪದ್ಧತಿಗನುಸಾರ ಸೂರ್ಯೋದಯದಿಂದ ಸೂರ್ಯಾಸ್ತದ ವರೆಗಿನ ವಾತಾವರಣವು ಅಧಿಕ ಚೈತನ್ಯಮಯವಾಗಿರುವುದರಿಂದ ಸಾಧನೆಯನ್ನು ಮಾಡುವವರಿಗೆ ಈ ಚೈತನ್ಯದ ಲಾಭವಾಗುತ್ತದೆ.*

*ದಾನದ ಬಗ್ಗೆ ಮಾಹಿತಿ*

*1*

*ಪರ್ವಕಾಲದಲ್ಲಿ ದಾನದ ಮಹತ್ವ :*

*ಮಕರಸಂಕ್ರಾಂತಿಯಿಂದ ರಥಸಪ್ತಮಿಯ ವರೆಗಿನ ಕಾಲವು ಪರ್ವಕಾಲವಾಗಿರುತ್ತದೆ. ಈ ಪರ್ವಕಾಲದಲ್ಲಿ ಮಾಡಿದ ದಾನ ಮತ್ತು ಪುಣ್ಯಕರ್ಮಗಳು ವಿಶೇಷ ಫಲವನ್ನು ಕೊಡುತ್ತವೆ.*

*2*

*ದಾನ ಕೊಡುವ ವಸ್ತುಗಳು :*

 *ಹೊಸಪಾತ್ರೆ, ವಸ್ತ್ರ, ಅನ್ನ, ಎಳ್ಳು, ಎಳ್ಳುಪಾತ್ರೆ, ಬೆಲ್ಲ, ಆಕಳು, ಕುದುರೆ, ಚಿನ್ನ ಅಥವಾ ಭೂಮಿಯನ್ನು ಯಥಾಶಕ್ತಿ ದಾನ ಮಾಡಬೇಕು. ಈ ದಿನ ಮುತ್ತೈದೆಯರು ದಾನ ಮಾಡುತ್ತಾರೆ. ಮುತ್ತೈದೆಯರು ಕೆಲವು ಪದಾರ್ಥಗಳನ್ನು ಕುಮಾರಿಯರಿಂದ ದೋಚುತ್ತಾರೆ (ಅಪಹರಿಸುತ್ತಾರೆ) ಮತ್ತು ಅವರಿಗೆ ಎಳ್ಳುಬೆಲ್ಲ ಕೊಡುತ್ತಾರೆ.'*

*ಮುತ್ತೈದೆಯರು ಅರಿಶಿನ-ಕುಂಕುಮದ ಕಾರ್ಯಕ್ರಮವನ್ನು ಮಾಡಿ ನೀಡುವ ದಾನಕ್ಕೆ 'ಬಾಗಿನ ನೀಡುವುದು' ಎಂದು ಹೇಳುತ್ತಾರೆ.*

*1ಅ.*

*ಬಾಗಿನ ನೀಡುವುದರ ಮಹತ್ವ :*

*ಬಾಗಿನ ನೀಡುವುದೆಂದರೆ'* *ಇನ್ನೊಂದು ಜೀವದಲ್ಲಿನ ದೇವತ್ವಕ್ಕೆ ತನು, ಮನ ಮತ್ತು ಧನದಿಂದ ಶರಣಾಗುವುದು. ಸಂಕ್ರಾಂತಿಯ ಕಾಲವು ಸಾಧನೆಗೆ ಪೂರಕವಾಗಿರುವುದರಿಂದ ಈ ಕಾಲದಲ್ಲಿ ನೀಡಿದ ಬಾಗಿನದಿಂದ ದೇವತೆಯ ಕೃಪೆಯಾಗಿ ಜೀವಕ್ಕೆ ಇಚ್ಛಿತ ಫಲಪ್ರಾಪ್ತಿಯಾಗುತ್ತದೆ.*

*2ಆ .*

*ಬಾಗಿನವೆಂದು ಯಾವ ವಸ್ತುಗಳನ್ನು ಕೊಡಬೇಕು ? :*

*ಇತ್ತೀಚೆಗೆ ಸಾಬೂನು, ಪ್ಲಾಸ್ಟಿಕ್‌ನ ವಸ್ತುಗಳಂತಹ ಅಧಾರ್ಮಿಕ ವಸ್ತುಗಳನ್ನು ಬಾಗಿನವೆಂದು ಕೊಡುವ ಅಯೋಗ್ಯ ಪದ್ಧತಿಯು ರೂಢಿಯಾಗಿದೆ ಇದು ಘೋರ ತಪ್ಪು ಇಂತಹ ದಾನ ಯೋಗ್ಯವಲ್ಲ. ಈ ವಸ್ತುಗಳ ಬದಲಿಗೆ ಸೌಭಾಗ್ಯದ ವಸ್ತುಗಳು, ಊದುಬತ್ತಿ, ಉಟಣೆ, ಧಾರ್ಮಿಕಗ್ರಂಥ, ಪುರಾಣಗ್ರಂಥ, ದೇವತೆಗಳ ಚಿತ್ರ, ಅಧ್ಯಾತ್ಮದ ಬಗೆಗಿನ ಧ್ವನಿಚಿತ್ರಮುದ್ರಿಕೆ ಮುಂತಾದ ಅಧ್ಯಾತ್ಮಕ್ಕೆ ಪೂರಕವಾಗಿರುವ ವಸ್ತುಗಳನ್ನು ಕೊಡಬೇಕು.*

*3ಇ. ಮಡಕೆ :*

 *ಸಂಕ್ರಾಂತಿಯ ಹಬ್ಬಕ್ಕೆ ಸಣ್ಣ 'ಮಣ್ಣಿನ ಮಡಕೆಗಳು' ಬೇಕಾಗುತ್ತವೆ.* 

*ಅವುಗಳಿಗೆ ಅರಿಶಿನ ಕುಂಕುಮವನ್ನು ಹಚ್ಚಿದಾರವನ್ನು ಸುತ್ತುತ್ತಾರೆ. ಮಡಕೆಗಳಲ್ಲಿ ಗಜ್ಜರಿ, ಬೋರೇಹಣ್ಣು, ಕಬ್ಬಿನ ತುಂಡು, ನೆಲಗಡಲೆ, ಹತ್ತಿ, ಕಡಲೆಕಾಳು, ಎಳ್ಳುಬೆಲ್ಲ, ಅರಿಶಿನ ಕುಂಕುಮ ಮುಂತಾದವುಗಳನ್ನು ತುಂಬಿಸುತ್ತಾರೆ. ರಂಗೋಲಿಯನ್ನು ಬಿಡಿಸಿ ಮಣೆ ಹಾಕಿ ಅದರ ಮೇಲೆ ಐದು ಮಡಕೆಗಳನ್ನಿಟ್ಟು ಅವುಗಳ ಪೂಜೆಯನ್ನು ಮಾಡುತ್ತಾರೆ. ಮೂರು ಮಡಕೆಗಳನ್ನು ಸೌಭಾಗ್ಯವತಿಯರಿಗೆ ದಾನವೆಂದು (ಬಾಗಿನ) ನೀಡುತ್ತಾರೆ, ಒಂದು ಮಡಕೆಯನ್ನು ತುಳಸಿಗೆ ಮತ್ತು ಇನ್ನೊಂದನ್ನು ತಮಗಾಗಿ ಇಟ್ಟುಕೊಳ್ಳುತ್ತಾರೆ.*

*ಇಲ್ಲಿ ಎಳ್ಳಿನ ಉಪಯೋಗ ಹೇಗೆ*

*ಸಂಕ್ರಾಂತಿಗೆ ಎಳ್ಳನ್ನು ಆದಷ್ಟು ಹೆಚ್ಚು ಪ್ರಮಾಣದಲ್ಲಿ ಉಪಯೋಗಿಸುತ್ತಾರೆ,*

*ಉದಾ. ಎಳ್ಳುನೀರಿನಿಂದ ಸ್ನಾನ ಮಾಡಿ ಎಳ್ಳು ಬೆಲ್ಲವನ್ನು ಸೇವಿಸುವುದು ಹಾಗೂ ಇತರರಿಗೂ ಕೊಡುವುದು, ಬ್ರಾಹ್ಮಣರಿಗೆ ಎಳ್ಳು ದಾನ ಮಾಡುವುದು, ಶಿವಮಂದಿರದಲ್ಲಿ ಎಳ್ಳೆಣ್ಣೆಯ ದೀಪ ಹಚ್ಚುವುದು, ಪಿತೃಶ್ರಾದ್ಧ ಮಾಡುವುದು (ಇದರಲ್ಲಿ ತಿಲಾಂಜಲಿ ನೀಡುತ್ತಾರೆ).*

*ಎಳ್ಳಿನ ಮಹತ್ವ ಹೇಗಿದೆ ಓದಿ*

*೧.*

*ಎಳ್ಳನ್ನು ಉಪಯೋಗಿಸುವುದರಿಂದ ಪಾಪಕ್ಷಾಲನೆಯಾಗುವುದು :*

*'ಈ ದಿನ ಎಳ್ಳೆಣ್ಣೆ ಮತ್ತು ಉಟಣೆಯನ್ನು ಮೈಗೆ ಹಚ್ಚುವುದು, ಎಳ್ಳುಮಿಶ್ರಿತ ಜಲದಿಂದ ಸ್ನಾನ ಮಾಡುವುದು, ಎಳ್ಳುಮಿಶ್ರಿತ ನೀರು ಕುಡಿಯುವುದು, ಎಳ್ಳಿನ ಹೋಮ ಮಾಡುವುದು ಮತ್ತು ಎಳ್ಳನ್ನು ದಾನ ಮಾಡುವುದು. ಈ ಪದ್ಧತಿಯಿಂದ ಎಳ್ಳನ್ನು ಉಪಯೋಗಿಸುವವರ ಎಲ್ಲ ಪಾಪಗಳು ನಾಶವಾಗುತ್ತವೆ.'*

*೨.*

*ಆಯುರ್ವೇದಕ್ಕನುಸಾರ ಮಹತ್ವ :*

*ಚಳಿಗಾಲದಲ್ಲಿ ಬರುವ ಸಂಕಾಂತ್ರಿಯಂದು ಎಳ್ಳನ್ನು ತಿನ್ನುವುದು ಲಾಭದಾಯಕವಾಗಿರುತ್ತದೆ.*

*ಇ.*

 *ಅಧ್ಯಾತ್ಮಕ್ಕನುಸಾರ ಮಹತ್ವ*

*೧.*

 *ಎಳ್ಳಿನಲ್ಲಿ ಸತ್ವ ಲಹರಿಗಳನ್ನು ಗ್ರಹಿಸುವ ಮತ್ತು ಪ್ರಕ್ಷೇಪಿಸುವ ಕ್ಷಮತೆಯು ಹೆಚ್ಚಿರುವುದರಿಂದ ಎಳ್ಳುಬೆಲ್ಲವನ್ನು ಸೇವಿಸುವುದರಿಂದ ಅಂತಃಶುದ್ಧಿಯಾಗಿ ಸಾಧನೆಯು ಒಳ್ಳೆಯ ರೀತಿಯಿಂದಾಗಲು ಸಹಾಯವಾಗುತ್ತದೆ.*

*ಎಳ್ಳುಬೆಲ್ಲವನ್ನು ಒಬ್ಬರಿಗೊಬ್ಬರು ಹಂಚುವುದರಿಂದ ಸಾತ್ವಿಕತೆಯ ಕೊಡುಕೊಳ್ಳುವಿಕೆಯಾಗುತ್ತದೆ.*

*೨.* 

*'ಶ್ರಾದ್ಧದಲ್ಲಿ ಎಳ್ಳನ್ನು ಉಪಯೋಗಿಸಿದರೆ ಅಸುರ ಮುಂತಾದವರು ಶ್ರಾದ್ಧದಲ್ಲಿ ವಿಘ್ನವನ್ನುಂಟು ಮಾಡುವುದಿಲ್ಲ.*

*ಎಂಬ ನಂಬಿಕೆ ಇದೆ*

*ಸದ್ಯ ರಾಷ್ಟ್ರ ಮತ್ತು ಧರ್ಮವು ಸಂಕಟದಲ್ಲಿರುವಾಗ ಮನೋರಂಜನೆಗಾಗಿ ಗಾಳಿಪಟವನ್ನು ಹಾರಿಸುವುದೆಂದರೆ, 'ರೋಮ್ ಹೊತ್ತಿ ಉರಿಯುತ್ತಿರುವಾಗ ನೀರೋ ಪಿಟೀಲು ಬಾರಿಸುತ್ತಿದ್ದನು', ಎಂಬಂತೆ ಆಗುವುದು. ಗಾಳಿಪಟ ಹಾರಿಸುವ ಸಮಯವನ್ನು ರಾಷ್ಟ್ರದ ವಿಕಾಸಕ್ಕಾಗಿ ಉಪಯೋಗಿಸಿದರೆ, ಬೇಗನೇ ರಾಷ್ಟ್ರದ ಪ್ರಗತಿಯಾಗುವುದು ಹಾಗೂ ಸಾಧನೆ ಮತ್ತು ಧರ್ಮಕಾರ್ಯಗಳಿಗಾಗಿ ಉಪಯೋಗಿಸಿದರೆ, ತನ್ನೊಂದಿಗೆ ಸಮಾಜದ ಕಲ್ಯಾಣವೂ ಆಗುವುದು.*

*(ಈ ವಿಷಯ ನಿಮ್ಮ ವೈಯಕ್ತಿಕ ಯಾರದೇ ಒತ್ತಡ ಅಥವಾ ವಿನಂತಿ ಇಲ್ಲ,)*

*ಕಿಂಕ್ರಾಂತಿ ಅಥವಾ ಕರಿದಿನ*

*ಇದು ಸಂಕ್ರಾಂತಿಯ ಮಾರನೆಯ ದಿನವಾಗಿದೆ. ಈ ದಿನ ದೇವಿಯು ಕಿಂಕರಾಸುರನನ್ನು ವಧಿಸಿದ್ದಳು.*

*(ಕೃಪೆ : ಮಾಸಿಕ 'ವೈದಿಕ ಉಪಾಸನಾ')*

*ಕಿಸಣ್ಣನ ಈ ಸಂಗ್ರಹ ನಿಮಗಾಗಿ*

🙏🙏🙏🙏🙏🙏🙏🙏🙏

*ಮತ್ತೊಮ್ಮೆ ಮಕರ ಸಂಕ್ರಾಂತಿಯ ಶುಭಾಶಯಗಳು*


ಪೇಜಾವರ ಶ್ರೀಗಳೊಂದಿಗೆ ಕುಶಲೋಪರಿ ನಡೆಸಿದ ಪ್ರಧಾನಿ ಮೋದಿ


ನವದೆಹಲಿ : ಅಯೋಧ್ಯೆ ರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ನ ವಿಶ್ವಸ್ಥರೂ ಆಗಿರುವ ಶ್ರೀ ಪೇಜಾವರ ಮಠಾಧೀಶ ಶ್ರೀ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ನವದೆಹಲಿಯಲ್ಲಿ ಸೋಮವಾರ ಸಂಜೆ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರನ್ನು ಭೇಟಿ ಮಾಡಿದರು.


ತಮ್ಮ ಗುರುಗಳಾದ ಕೀರ್ತಿಶೇಷ ಶ್ರೀ ವಿಶ್ವೇಶತೀರ್ಥ ಶ್ರೀಪಾದರಿಗೆ ಭಾರತ ಸರ್ಕಾರ ಮರಣೋತ್ತರವಾಗಿ ಘೋಷಿಸಿದ್ದ ಪದ್ಮವಿಭೂಷಣ ಪ್ರಶಸ್ತಿ ಯನ್ನು ಸ್ವೀಕರಿಸಲು ನವದೆಹಲಿಗೆ ತೆರಳಿದ್ದ ಸಂದರ್ಭದಲ್ಲಿ ಈ ಭೇಟಿ ನಡೆಯಿತು .

ಈ ಸಂದರ್ಭದಲ್ಲಿ ಶ್ರೀಗಳೊಂದಿಗೆ ಕುಶಲೋಪರಿ ನಡೆಸಿದ ಮೋದಿಯವರು ಶ್ರೀ ವಿಶ್ವೇಶತೀರ್ಥರನ್ನು ವಿಶೇಷವಾಗಿ ಸ್ಮರಿಸಿದರು .

ರಾಮಮಂದಿರ ನಿರ್ಮಾಣ ಕಾರ್ಯಗಳ ಪ್ರಗತಿಯ ಕುರಿತೂ ಈರ್ವರೂ ಸಮಾಲೋಚನೆಗೈದರು.

 ಪೇಜಾವರ ಶ್ರೀಗಳೊಂದಿಗೆ ಪ್ರಧಾನಿ ಮೋದಿ

ನರೇಂದ್ರ ಮೋದಿಯವರಿಗೆ ಯಕ್ಷಗಾನದ ಕೇದಗೆ ಮುಂಡಾಸಿನ ಕಿರೀಟ ತೊಡಿಸಿ ಜರತಾರಿ ಶಾಲು, ಬೆಳ್ಳಿಯ ತಟ್ಟೆಯಲ್ಲಿ ಉಡುಪಿ ಶ್ರೀ ಕೃಷ್ಣನ ಗಂಧ , ನಿರ್ಮಾಲ್ಯ ತುಳಸಿ ನೀಡಿ ಆಶೀರ್ವದಿಸಿದರು . ಉಡುಪಿಯ ಚಿತ್ರಕಲಾವಿದೆ ವಸಂತಲಕ್ಷ್ಮೀ ಹೆಬ್ಬಾರ್ ಅವರು ರಚಿಸಿದ ಮೋದಿಯವರು ಉಡುಪಿ ಕೃಷ್ಣನಿಗೆ ಕೈಮುಗಿಯುವ ಭಂಗಿಯ ಸುಂದವಾದ ತೈಲಚಿತ್ರ ಹಾಗೂ ಸಂಸ್ಕೃತ , ಕನ್ನಡ , ತುಳು ಲಿಪಿಗಳಲ್ಲಿ ನರೇಂದ್ರ ಮೋದಿಯವರ ಹೆಸರನ್ನು ಕೆತ್ತಿದ ಸ್ಮರಣಿಕೆಯನ್ನೂ ಶ್ರೀಗಳು ಪ್ರಧಾನಮಂತ್ರಿಯವರಿಗೆ ನೀಡಿದರು. ಈ ಭೇಟಿಯ ಬಗ್ಗೆ ಶ್ರೀಗಳು ಮತ್ತು ಪ್ರಧಾನಮಂತ್ರಿಗಳು ಅತೀವ ಸಂತಸ ವ್ತಕ್ತಪಡಿಸಿದರು .


 ( ಪ್ರಧಾನ ಮಂತ್ರಿ ಅಧಿಕಾರದ) ಅವಧಿಯಲ್ಲೇ ಉಡುಪಿ ಕೃಷ್ಣ ದರ್ಶನಕ್ಕೆ ಆಗಮಿಸುವಂತೆ ಶ್ರೀಗಳು ಆಹ್ವಾನಿಸಿದರು .‌ ಖಂಡಿತ ಬಂದೇ ಬರ್ತೇನೆ ಚಿಂತೆ ಬೇಡ ಎಂದು ಮೋದಿಯವರು ತುಂಬ ಹರ್ಷದಿಂದಲೇ ತಿಳಿಸಿದರು .

ಇದೇ ಸಂದರ್ಭದಲ್ಲಿ , 1 . ದೇಶದಲ್ಲಿ ಗೋಹತ್ಯಾ ನಿಷೇಧ ಕಾನೂನು ಜಾರಿಗೊಳಿಸುವುದು , 2 ದೇಶಾದ್ಯಂತ ಹಿಂದೂ ಶ್ರದ್ಧಾಕೇಂದ್ರಗಳನ್ನು ಸರ್ಕಾರಿ ವ್ಯವಸ್ಥೆಯಿಂದ ಸ್ವಾಯತ್ತಗೊಳಿಸುವುದು , 3 . ಮಹರ್ಷಿ ವೇದವ್ಯಾಸರ ಜಯಂತಿಯನ್ನು (ಆಷಾಢ ಪೂರ್ಣಿಮಾ ಅಥವಾ ಒಂದು ನಿರ್ದಿಷ್ಟ ದಿನಾಂಕವನ್ನು ) ” ತತ್ತ್ವಜ್ಞಾನ ದಿನ ” ಅಥವಾ ” ಅಧ್ಯಾತ್ಮ ದಿನ ” ಎಂದು ಘೋಷಿಸಿ ಸರ್ಕಾರಿ ಆಚರಣೆಗೆ ವ್ಯವಸ್ಥೆಗೊಳಿಸುವುದು , ಹಾಗೂ ತುಳು ಭಾಷೆಯನ್ನು ಸಂವಿಧಾನದ 8 ನೇ ಪರಿಚ್ಛೇದಕ್ಕೆ ಸೇರ್ಪಡೆಗೊಳಿಸುವುದು ಎಂಬ ನಾಲ್ಕು ಅಪೇಕ್ಷೆಗಳನ್ನು ಲಿಖಿತವಾಗಿ ನೀಡಿದರು . ಈ ಬಗ್ಗೆಯೂ ಗಮನಹರಿಸುವುದಾಗಿ ಮೋದಿಯವರು ತಿಳಿಸಿದರು .‌


ಶ್ರೀ ಪೇಜಾವರ ಮಠದ ದಿವಾನರಾದ ಎಂ ರಘುರಾಮಾಚಾರ್ಯ, ಡಿ ಪಿ ಅನಂತ್ , ಸಾಮಾಜಿಕ ಕಾರ್ಯಕರ್ತ ಶ್ರೀಗಳ ಆಪ್ತ ವಾಸುದೇವ ಭಟ್ ಪೆರಂಪಳ್ಳಿ ಉಪಸ್ಥಿತರಿದ್ದರು.

ಊಟದ ಪ್ರಭಾವ ಜೀವನದ ಮೇಲೆ...

ಮೂರು ತಿಂಗಳು ಸಾತ್ವಿಕ ಭೋಜನ ಮಾಡಿ ನೋಡಿ , ಸಾತ್ವಿಕ ಭೋಜನ ಅಂದರೆ ಕೇವಲ ಶಾಕಾಹಾರಿ ಅಲ್ಲ, ದೇವರಿಗೆ ಸಮರ್ಪಿಸಿದ ‌ಅನ್ನ.

ನಿಮ್ಮ ದೇಹದಲ್ಲಿ ಆಗುವ ಪರಿವರ್ತನೆ ಗಮನಿಸಿ , ಏರಡೂ ಶಾರೀರಿಕ  ಮತ್ತು ಮಾನಸಿಕ ಬದಲಾವಣೆ  ಮಾಡುತ್ತದೆ.

ನಾವು ಸಿಟ್ಟಿನ ಭರದಲ್ಲಿ ಮಾಡಿದ ಅಡಿಗೆಗೆ ಸಾತ್ವಿಕ ಅಡಿಗೆ ಅನ್ನುವುದಿಲ್ಲ. ಹಾಗೇ ಅಡಿಗೆ ಮಾಡುವಾಗ ಯಾರ ಮೇಲೂ ಸಿಟ್ಟು ಮಾಡುವದು, ಚೀರಾಡುವದು ಮಾಡುವದು ಸರಿಯಲ್ಲ ಇದು ಈಗ ಸಹಜವಾಗಿದೆ.

ಏಕೆಂದರೆ ನಾವು ಸಿಟ್ಟಿನ ಭರದಲ್ಲಿ ಮಾಡಿದ ಅಡುಗೆಗೆ ನಕಾರಾತ್ಮಕ ಕಂಪನ ಹೊಗುವದು ಸಹಜ.

 ನೆನಪಿಡಿ ನಾವು ಅದನ್ನೇ ಉಣ್ಣುವುದು.ಅದಕ್ಕೆ ನಮ್ಮ ಹಿಂದೂ ಧರ್ಮದ ಆಚರಣೆಗಳಲ್ಲಿ ಸ್ನಾನ ಮಾಡಿ, ಶುಭ್ರ ವಸ್ತ್ರ ಧರಿಸಿ ದೇವರ ನಾಮಸ್ಮರಣೆ ಮಾಡುತ್ತಾ ಅಡಿಗೆ ಮಾಡುವ ಸಂಪ್ರದಾಯ ಇಂದಿಗೂ ಗುಡಿ , ಮಠ , ದಾಸೋಹ ಗಳಲ್ಲಿ ಕಾಣುವುದುಂಟು.


3 ತರಹದಲ್ಲಿ ಅಡುಗೆ ಊಟ ಇರುತ್ತೆ.

1.ಮನೆಯಲ್ಲಿ ತಾಯೀ, ಪತ್ನಿ ಮಾಡುವ ಅಡಿಗೆ, ಊಟ.

2.ಮಂದಿರ, ಮಠಗಳಲ್ಲಿ ಮಾಡುವ ಅಡಿಗೆ, ಊಟ.*

3. ಹೋಟೆಲ್ ಪಾರ್ಟಿಗಳಲ್ಲಿನ ಊಟ.  

ಈ ಮೂರು ಪ್ರಕಾರದ ಊಟದಲ್ಲಿ ಬೇರೆ ಬೇರೆ ತರಹದ ಸ್ಪಂದನೆಗಳು ಇರುತ್ತವೆ.


ಊಟದ ಪ್ರಭಾವ ಜೀವನದ ಮೇಲೆ

ಹೋಟೆಲ್ ಊಟ...

ಇಲ್ಲಿ ಯಾವುದೇ ರೀತಿಯ ಸಕಾರಾತ್ಮಕ  ಕಂಪನ ಇರುವುದಿಲ್ಲ.

ಕೇವಲ ದುಡ್ಡಿಗಾಗಿ , ಸ್ವಾರ್ಥಕ್ಕಾಗಿ ಮಾಡಿದ ಅಡಿಗೆ ಅದು, ಯಾರು ಅಡಿಗೆ ಮಾಡುತ್ತಾರೋ, ಅವರ ಮನಸ್ಸಿನ ಸ್ಪಂದನೆಗಳು ಯಾವ ತರಹ ಇರುತ್ತದೋ ಗೊತ್ತಿಲ್ಲ,

ಅವರ ಮನಸ್ಸಿನ ಸ್ಪಂದನೆಗಳು ಅವರು ಮಾಡಿದ ಅಡಿಗೆಯಲ್ಲಿ ಇಳಿಯುತ್ತವೆ.


ಮನೆಯಲ್ಲಿ ತಾಯಿ, ಅಥವಾ ಪತ್ನಿ ಮಾಡುವ ಅಡಿಗೆ...

ಮನೆಯಲ್ಲಿ ಮಾಡುವ ಅಡಿಗೆಯಲ್ಲಿ ಪ್ರೀತಿ, ಅಂತಃಕರಣ ಇರುತ್ತದೆ ಅಂದರೆ ಸಕಾರಾತ್ಮಕ ಸ್ಪಂದನೆಗಳು ಇರುವ ಅಡಿಗೆ.

ಆದರೆ ಇತ್ತೀಚಿಗೆ ಮನೆಯಲ್ಲಿ ಅಡಿಗೆ ಕೆಲಸದವಳು ಅಡಿಗೆ ಮಾಡುವ ಫ್ಯಾಶನ್ ಆಗಿದೆ. ಮನೆಯಲ್ಲಿ ಒಂದಿಬ್ಬರೆ ಇದ್ದರೂ,ಅಡಿಗೆ ಮಾಡುವುದು ಅಡಿಗೆ ಕೆಲಸದವಳೆ , ಅವಳ ಮನಸ್ಸು ಯಾವ ತರಹ ಇದೆ, ಅವಳು ದುಡ್ಡಿಗೆ ಮಾತ್ರ ಅಡಿಗೆ ಮಾಡುವಳು.

 ಅಲ್ಲಿಯೂ ನಕಾರಾತ್ಮಕ ಕಂಪನ ಇರುವುದು, ಆದರೆ ಈ ಅಡಿಗೆ ನಾಲಿಗೆಗೆ ರುಚಿ ಆದರೂ ದೇಹಕ್ಕೆ ಒಳ್ಳೆಯದಲ್ಲ.

ಸ್ವಲ್ಪ ವಿಚಾರ ಮಾಡಿ ನೋಡಿ.

ನಿಮ್ಮ ಮನೆಯ ಅಜ್ಜಿ , ತಾಯೀ ಮಾಡಿದ ಅಡಿಗೆ ಮತ್ತು ಕೆಲಸದವಳು ಮಾಡುವ ಅಡಿಗೆಗೆ ಎಷ್ಟು ‌ವ್ಯತ್ಯಾಸ ?

ತಾಯಿ ಅಡಿಗೆ ಮಾಡುವಾಗ ಮಗ ಒಂದು ರೊಟ್ಟಿ , ಅಥವಾ ಚಪಾತಿ ಹೆಚ್ಚು ಕೇಳಿದರೆ ತಾಯಿಗೆ ಇನ್ನೂ ಹೆಚ್ಚು ಆನಂದ ಆಗುವುದು ಸಹಜ, ಅದೇ ಅಡುಗೆ ಅವಳಿಗೆ ಒಂದೆರಡು ಹೆಚ್ಚು ರೊಟ್ಟಿ, ಚಪಾತಿ ಮಾಡಲು ಹೇಳಿ ನೋಡಿ, ಅವಳ ಮುಖದಲ್ಲಿ ಕಾಣುವ ಒಂದು ತರಹದ ವ್ಯತ್ಯಾಸ.


ಮಂದಿರ ಮಠಗಳಲ್ಲಿನ ಅಡಿಗೆ...


ಅದು ದೇವರಿಗೆ ನೈವೇದ್ಯ ಅರ್ಪಿಸಿ , ನಮಗೆ ಬಡಿಸುವ ಅಡಿಗೆ, ಅದು ನಾವು ಉಣ್ಣುವುದು ಪ್ರಸಾದ ರೂಪದಲ್ಲಿ, ಅಲ್ಲಿ ಮಾಡುವ ಅಡಿಗೆಯಲ್ಲಿ ಪಾಸಿಟಿವ್ ಸಕಾರಾತ್ಮಕ ಕಂಪನ ತುಂಬಿ ತುಳುಕುತ್ತಿರುತ್ತದೆ.

ಆದಕಾರಣ ನಾವು ಮಾಡುವ ಅಡಿಗೆ ದೇವರಿಗೆ ಸಮರ್ಪಿಸಿ , .

ಅದರ ಸ್ವಲ್ಪ ಭಾಗ ಬಡವರಿಗೆ ಸಮರ್ಪಿಸಿ ನಾವು ಸೇವಿಸುವುದು ಉತ್ತಮ.

ಹಿಂದಿನ ದಿನಗಳಲ್ಲಿ, ಪ್ರತಿಯೊಂದು ಮನೆಯ ಮೊದಲನೆಯ ರೊಟ್ಟಿ ಮಂದಿರ, ಬಡಬಗ್ಗರು , ನಿರ್ಗತಿಕರು, ಮಠಕ್ಕೆ ಅರ್ಪಿಸಿ, ಸೇವಿಸುವ ಪದ್ಧತಿ ಇತ್ತು, ಈಗಲೂ ಕೆಲವು ಹಳ್ಳಿಗಳಲ್ಲಿ ಈ ಪದ್ಧತಿ ಇದೆ,

ನಮ್ಮ ಅಜ್ಜಿ, ನಮ್ಮ ತಾಯೀ ಪ್ರತಿ ದಿನವೂ ಸ್ವಲ್ಪ ಭಾಗದ ಅಡಿಗೆ ಆಕಳಿಗೆ ಗೋಗ್ರಾಸ ಎಂದು ಕೊಡುವುದನ್ನು ನಾನು ಸಣ್ಣವನಿದ್ದಾಗ ನೋಡಿದ ನೆನಪಿದೆ.

ಅನ್ನದಲ್ಲಿ ಜಾದು ಇದೆ. ಅಡಿಗೆ ಮಾಡುವವರಲ್ಲಿ ಒಳ್ಳೆಯ ಸಂಸ್ಕಾರವಿದೆ. ಮತ್ತು ಅಡಿಗೆ ಮಾಡುವಾಗ ದೇವರ ನಾಮ ಸ್ಮರಣೆ ಮಾಡುತ್ತಾ ಅಡಿಗೆ ಆದ ಮೇಲೆ ದೇವರಿಗೆ ಸಮರ್ಪಿಸಿ ಊಟ ಮಾಡಿ ನೋಡಿ.

3 ತಿಂಗಳು ಇದನ್ನು ಮಾಡಿ ನೋಡಿ.

ನಿಮ್ಮಲ್ಲಿ ಆಗುವ ಬದಲಾವಣೆಗಳನ್ನು ನೀವೆ ನೋಡಿರಿ.

ನಟ ಪುನಿತ್ ರಾಜಕುಮಾರ್ ಇನ್ನಿಲ್ಲ....

 ಚಿಕ್ಕ ವಯಸ್ಸಿನಿಂದಲೂ ಸಿನಿಮಾರಂಗದಲ್ಲಿ ಸಕ್ರಿಯರಾಗಿರುವ ಪುನೀತ್ ಅವರಿಗೆ ಕೋಟ್ಯಂತರ ಅಭಿಮಾನಿಗಳಿದ್ದಾರೆ. ಫ್ಯಾಮಿಲಿ ಆಡಿಯನ್ಸ್ ಅವರನ್ನು ಹೆಚ್ಚು ಇಷ್ಟಪಡುತ್ತಾರೆ. ಮಕ್ಕಳಿಗೂ ಅಪ್ಪು ಎಂದರೆ ಅಚ್ಚುಮೆಚ್ಚು. ಅವರು ಬೇಗ ಗುಣಮುಖರಾಗಲಿ ಎಂದು ಎಲ್ಲರೂ ಸೋಶಿಯಲ್ ಮೀಡಿಯಾ ಮೂಲಕ ಪ್ರಾರ್ಥಿಸಿದ್ದರು. ಆದರೆ, ಈ ಪ್ರಾರ್ಥನೆ ಕೊನೆಗೂ ಇಡೇರಲೇ ಇಲ್ಲ.


ಶುಕ್ರವಾರ ಬೆಳಗ್ಗೆ ಜಿಮ್​ನಲ್ಲಿ ವರ್ಕೌಟ್ ಮಾಡುವಾಗ ಪುನೀತ್ ರಾಜ್​​ಕುಮಾರ್ ಅವರಿಗೆ ಆರೋಗ್ಯ ಸಮಸ್ಯೆ ಉಂಟಾಯಿತು. ಹೃದಯಕ್ಕೆ ಸಂಬಂಧಿಸಿದ ಸಮಸ್ಯೆ ಕಾಣಿಸಿಕೊಂಡಿದೆ ಎಂದು ಹೇಳಲಾಗಿತ್ತು. ನಂತರ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ, ಅವರು ಆಸ್ಪತ್ರೆಯಿಂದ ಹೊರಬರಲೆ ಇಲ್ಲ.


‘ಇವತ್ತು ಬೆಳಗ್ಗೆ 11:30ಕ್ಕೆ ಚೆಸ್ಟ್​ ಪೆನ್​ ಆಗಿ ಇಲ್ಲಿ ಬಂದಿದ್ದಾರೆ. ಬರುವಾಗ ಸ್ವಲ್ಪ ಸೀರಿಯಸ್​ ಆಗಿತ್ತು. ಗಂಭೀರ ಹೃದಯಾಘಾತವಾಗಿದೆ. ಇನ್ನೂ, ಆರೋಗ್ಯ ಗಂಭೀರವಾಗಿದೆ. ಏನನ್ನೂ ಹೇಳೋಕೆ ಆಗಲ್ಲ. ನಮ್ಮ ಪ್ರಯತ್ನ ನಾವು ಮಾಡುತ್ತಿದ್ದೇವೆ’ ಎಂದು ವೈದ್ಯರು ತಿಳಿಸಿದ್ದರು.

Punit Rajkumar



ಪುನೀತ್​ ರಾಜ್​ಕುಮಾರ್​ ಮೃತಪಟ್ಟ ವಿಚಾರವನ್ನು ಅರಗಿಸಿಕೊಳ್ಳೋಕೆ ಯಾರಿಂದಲೂ ಸಾಧ್ಯವಾಗುತ್ತಿಲ್ಲ. ಅವರು ಮೃತಪಟ್ಟ ವಿಚಾರ ಅನೇಕರಿಗೆ ನಿಜಕ್ಕೂ ಶಾಕ್​ ನೀಡಿದೆ. ಈಗ ಪುನೀತ್​ ಸಾವಿನ ಸುದ್ದಿ ಕೇಳಿ ಅಭಿಮಾನಿಯೊಬ್ಬರು ಮೃತಪಟ್ಟ ಘಟನೆ ಚಾಮರಾಜ ನಗರದಲ್ಲಿ ನಡೆದಿದೆ. ಹೃದಯಾಘಾತದಿಂದ ಮುನಿಯಪ್ಪ(30) ಎಂಬ ಅಭಿಮಾನಿ ಮೃತಪಟ್ಟಿದ್ದಾರೆ. ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಮರೂರು ಗ್ರಾಮದ ಮುನಿಯಪ್ಪ ಪುನೀತ್​ ಸಾವಿನ ಸುದ್ದಿ ಕೇಳುತ್ತಿದ್ದಂತೆ ಕುಸಿದು ಬಿದ್ದಿದ್ದಾರೆ. ಪುನೀತ್​ ಜತೆ ಅವರ ಅಭಿಮಾನಿಯೂ ಮೃತಪಟ್ಟಿದ್ದು ದುರದೃಷ್ಟಕರ.


ಏತ್ ಪೊರ್ಲು ತೋಜುವರಮ್ಮ

  ಏತ್ ಪೊರ್ಲು ತೋಜುವರಮ್ಮ

ತೂಪಿನೆನ್ನ ಪುಣ್ಯಾ..       ||ಏತ್||

ಪೆದ್ದಿ ಅಪ್ಪೆನೆ ಈರೆ ಪಂಡ್ದ್

ಅರಾದ್ ಪತ್ತೆರೆ ಆಸೆ ಎನ್ನ

                     ||ಏತ್ ಪೊರ್ಲು||


ಏತ್ ಜನ್ಮೊದ ಎಡ್ಡೆಂತಿ ಫಲೊನ

ಇರೆನ್ ತೂಪಿನೊಂಜಿ

ಇರೆನ ಎದುರುಡೆ ಇಂಚ ಕುಲ್ಲೆರೆ

ಬಾಲೆ ಆದ್ ಒಂಜಿ 

                    ||ಏತ್ ಜನ್ಮೊದ||

ಏತ್ ಪೊರ್ಲು ತೋಜುವರಮ್ಮ

ಇರೆನ ಮೋನೆನೆ ತೂವೊಂದು ಕುಲ್ಲುನ 

ಆಸೆ ಎಂಕ್ ಒಂಜಿ

ದೂರ ಮಲ್ಪಡೆ ಎನನ್ ಈರ್

ಪಾದದ ಅಡಿಟ್ ಕುಲ್ಲುವೆಯಮ್ಮ

                   ||ಏತ್ ಪೊರ್ಲು||


ಮಳ್ಳಿಗೆ ಅರಳುನ ಮುಗುರು ತೆಲಿಕೆನೆ 

ಬಂಜಿನ್ ಜಿಂಜಾವುಂಡು

ಪುಣ್ಣಮೆ ಚಂದ್ರೊನ ಬೊಲ್ಪುದ ಮೋನೆ

ಭಕ್ತಿನ್ ಉರ್ಕಾವುಂಡೂ

                               ||ಮಳ್ಳಿಗೆ||

ಕಡಪುಡಡೆ ಪಿರ ಈರ್ ಎನನ್ ಅಂಚಿ

ಬುಲಿಪುವೆ ತೂಲೆಪಗಾ

ಪುರೆಳುವೆ ಮೂಲೆ ಇರೆನ ಕಾರ್ದಡಿ

ಪೊವಯೆ ಮುಲ್ತು ಇರೆನ್ ಬುಡ್ದು ಯಾನ್

         ‌                     ||ಏತ್ ಪೊರ್ಲು||


ಮನಿಪಂದೆ ಕುಲ್ಲುವೆ ಪಾತೆರುಜ್ಯಾನ್

ತೂಪಿನಿ ಮಾತ್ರ ಇರೆನ್

ನೆರೆಡೆ ಈರ್ ಎಂಕ್ ,ಕೋಪ ಮಲ್ಪಡೆ

ಪಾಪದಾಲ್ ಯಾನ್

                                 ||ನೆರೆಡೆ||

ಇರೆನ್  ನಂಬಿನ ಬಾಲೆ ಯಾನ್

ಗತಿಯೇ ಈರಮ್ಮ ||ಇರೆನ್||

ಇರೆನ ಕರುಣೆ ಒಂಜಿ ತಿಕ್ಕ್ಂಡ ಯಾವು

ಬೇತೆ ದಾಲ ಬೊರ್ಚಿ ಅಮ್ಮಾ

                             ||ಏತ್ ಪೊರ್ಲು||

ಅವಳೆಂದರೆ...

 ಅವಳೆಂದರೆ...

ಅವಳು ಸ್ವಲ್ಪ ಬಿನ್ನ
 ನನ್ನ ಹಾಗೇನೆ
ಹಾಗಾಗಿಯೇ ನಾನು ಅವಳೊಂದಿಗೆ ಭಾವನಾತ್ಮಕ ಬೆಸೆದಿರುವೆ...

ಅವಳು ನನ್ನೆಲ್ಲ ವಿಚಾರಗಳನ್ನು ಒಪ್ಪಬೇಕೆಂದಿಲ್ಲ ...
ನನ್ನೀ ಅನಿಸಿಕೆ ಅವಳಿಗೂ ಸಹಮತವಿದೆ...

ಅವಳು ಸ್ವಲ್ಪ ಮೂಡಿ ಅದೇ ನನಗಿಷ್ಟ
ಒಮ್ಮೊಮ್ಮೆ ಬಲು ಕಷ್ಟ...

ನನ್ನೆಲ್ಲ ಮಾತನ್ನು ಆಕೆ ಒಪ್ಪುವವಳಲ್ಲ...
ಒಪ್ಪಬೇಕೆಂದೂ ಇಲ್ಲ...

ಅವಳ ಮೊಗದ ಸೌಂದರ್ಯದಷ್ಟೇ ಅಂದದ ಮನಸ್ಸು ...
ಅವಳನ್ನು ಹೊಗಳುತ್ತೆನೆಂದರೆ
ಅದು ಪ್ರೀತಿ ಅಂತೂ ಅಲ್ಲ .

ಅವಳೆಂದರೆ

ಮತ್ತೆ ಮತ್ತೆ  ಅವಳನ್ನು ಕಾಣಬೇಕು ಎನ್ನುವ 
ಕತುರತೆಯು ಸುಳ್ಳಲ್ಲ ...

ಸಹವಾಸ ಮತ್ತು ಪ್ರೀತಿ 
ಪ್ರೀತಿ ಮತ್ತು ಕನಸು , ಕನಸು ಮತ್ತು ಕವಿತೆ
ಅವಳನ್ನಲಂಕರಿಸುವ ಆಭರಣ...

ಅವಳನ್ನು ಹೊಗಳುವ
ಶೃಂಗಾರದ ಪದಗಳಿಂದಲೇ
ನಾನಿಂದು ಕವಿಯಾಗಿರುವೆ...

ಏನಾದರೂ ಬರೆಯುವ ಮುನ್ನ ಪ್ರತ್ಯಕ್ಷ ಅಪ್ರತ್ಯಕ್ಷವಾಗಿ 
ಅವಳನ್ನೊಮ್ಮೆ ಭೇಟಿಯಾಗುವೆ
ಅವಲಿಗರಿವಾಗದಂತೆ...

ಈಗೀಗ ಅವಳನ್ನು ನಿತ್ಯ ಕಾಣುವಾಸೆ
ಯಾಕೆ ಹೀಗೆ...?

ಅವಳ ಅಂತರಂಗವ ನಾನರಿಯೆ ...
ನನ್ನ ಮನದ ಮಾತನ್ನು ಅರುಹದಾದೆ ...

ಅವಲಿರಲಿ ಅವಲಿರುವಂತೆ ...
ಕಾರಣ ಅವಳು ಎಲ್ಲರಂತಲ್ಲ 
ಅವಳು ನನ್ನ ಹಾಗೆನೇ
ಸ್ವಲ್ಪ ಭಿನ್ನ ...

ಅವತಾರವಾಣಿ (ಆದರ್ಶ ವಿದ್ಯಾರ್ತಿಗಳು)

ಅವತಾರವಾಣಿ 

ಸುಂದರವಾದ ಪುಷ್ಯಮಾಸ ಮೊಡಗಳೆಲ್ಲಾ ಸರಿದು  ಹೋಗಿ ಸೂರ್ಯ ದೇವನು ಸುಂದರವಾಗಿ ಶೋಬಿಸುತಿದ್ದಾನೆ. ಧೀರ್ಗವಾಗಿದ್ದ ಹಗಲು ಗಿಡ್ದವಾಗಿದೆ. ಗಿಡ್ದವಾಗಿದ್ದ ರಾತ್ರಿ ಉದ್ದವಾಗಿದೆ. ಚಳಿಗಾಲದ ತಂಪಾದ  ಗಾಳಿ ಚುರುಕಾಗಿ ಬೀಸುತ್ತಿದೆ. ಗಿಡಗಳ ಮೇಲೆ ಹೂಗಳು ಸುಂದರವಾಗಿ ಅರಳಿ ನಿಂತಿವೆ. ರಾತ್ರಿಯ ಬೆಳದಿಂಗಳ ಮೇಲೆ ರೈತರು ತಮ್ಮ ಹೊಲಗಳಲ್ಲಿ ಗಟ್ಟಿಯಾಗಿ ಹಾಡುತ್ತ ತೆನೆ ತುಂಬಿದ ತಮ್ಮ ಪೈರುಗಳನ್ನು ಕಾಯುತ್ತಿದ್ದಾರೆ.ಮನೆಗಳಲ್ಲಿಯೂ ಧಾನ್ಯವು ರಾಶಿ ರಾಶಿಯಾಗಿ ಸಂಗ್ರಹವಾಗುತ್ತಿದೆ. ಇಂತಹ ನಯನ  ಮನೋಹರವಾದ  ವಾತಾವರಣದಲ್ಲಿ ರಸಿಕರನ್ನು ರಂಜಿಸಲು ಸಂಕ್ರಾಂತಿ ಹಬ್ಬವು ಬಂದಿದೆ.


ಅವತಾರವಾಣಿ




ತಿಲ ಮದ್ಯೇ ಯಥಾ  ತೈಲಂ
ಕ್ಷಿರಮದ್ಯೇ ಯಥಾ ಘ್ರುಂತಂ
ಪುಷ್ಪಮದ್ಯೇ ಯಥಾ ಗಂಧಂ
ಫಲಮದ್ಯೇ ಯಥಾ ರಸಂ
ಕಾಷ್ಟಾಗ್ನಿವತ್ ಪ್ರಕಾಶೇನ
ತಲ್ಲಿಂಗಂ ಯ್ಹ ಚರಂಪ್ರಬೋ //


ಎಳ್ಳಿನಲ್ಲಿ ಎಣ್ಣೆಯಾಗಿ, ಹಾಲಿನಲ್ಲಿ ಬೆಣ್ಣೆಯಾಗಿ, ಹೂವಿನಲ್ಲಿ ಪರಿಮಳವಾಗಿ, ಹಣ್ಣಿನಲ್ಲಿ ರಸವಾಗಿ,
ಸೌದೆಯಲ್ಲಿ ಬೆಂಕಿಯಾಗಿ, ಕಣ್ಣಿನಲ್ಲಿ ದೃಷ್ಟಿಯಾಗಿ, ಕಿವಿಯಲ್ಲಿ ಶಬ್ದವಾಗಿ, ನಾಲಿಗೆಯಲ್ಲಿ ರುಚಿಯಾಗಿ ಇರುವ ಭಗವಂತನು, ಸರ್ವ ಪ್ರಾಣಿಗಳಿಗೂ ಚೈತನ್ಯದಯಕನಾಗಿದ್ದಾನೆ. ರತ್ನಹಾರದೊಳಗಿನ  ದಾರವು ಕಾಣದಂತೆ, ವಿಶ್ವೆಶ್ವರನು ವಿಶ್ವದಲ್ಲೆಡೆ ವ್ಯಾಪಿಸಿಕೊಂಡಿದ್ದು   ಕಾಣದಂತೆ ಇರುತ್ತಾನೆ.