Search This Blog

  • ()

Subcribe

Enter your email address:

Delivered by FeedBurner

The Most/Recent Articles

ನಿಮಗಿದು ತಿಳಿದಿರಲಿ

 ನಿಮಗಿದು ತಿಳಿದಿರಲಿ.



ಪ್ರಶ್ನೆ : ದೇವಾಲಯದಲ್ಲಿ ದರ್ಶನ ಮಾಡಿದ ನಂತರ, ಹೊರಗಿನ ಆಸನದ ಮೇಲೆ ಸ್ವಲ್ಪ ಹೊತ್ತು ಏಕೆ ಕುಳಿತುಕೊಳ್ಳಬೇಕು?
ಉತ್ತರ : ದೇವಾಲಯಗಳಿಗೆ ಹೋದಾಗ ದೇವರ ದರ್ಶನ ಮುಗಿಸಿ ನಮಸ್ಕಾರವನ್ನು ಮುಗಿಸಿದ ನಂತರ ಒಂದೆರಡು ನಿಮಿಷ ಹೊರಗೆ ಕುಳಿತು ಕೊಳ್ಳುವದು ಸಂಪ್ರದಾಯ. ಆದರೆ ಕುಳಿತಾಗ ನಾವು ದರ್ಶನ ಮಾಡಿದ ದೇವರನ್ನು ನೆನೆಸಿಕೊಂಡು ಈ ಕೆಳಗಿನ ಶ್ಲೋಕವನ್ನು ಹೇಳಿಕೊಂಡು ಪ್ರಾರ್ಥಿಸಿಕೊಳ್ಳಬೇಕು. ಇದನ್ನು ನಿರ್ದಿಷ್ಟ ಉದ್ದೇಶಕ್ಕಾಗಿ ಮಾಡಲಾಗಿದೆ. ವಾಸ್ತವವಾಗಿ ಇಂದಿನ ಜನರು ಈ ಶ್ಲೋಕವನ್ನು ಮರೆತಿದ್ದಾರೆ. 
ಶ್ಲೋಕ ಹೀಗಿದೆ:-  
             
  (೧) ಅನಾಯಾಸೇನ ಮರಣಂ|
  (೨)ವಿನಾ ದೈನೇನ ಜೀವನಂ|
  (೩) ದೇಹಾಂತ ತವ ಸಾನಿಧ್ಯಮ್|
  (೪) ದೇಹಿಮೇ ಪರಮೇಶ್ವರ | 

ಈ ಶ್ಲೋಕದ ಅರ್ಥ ಹೀಗಿದೆ:-  

ಅನಾಯಾಸೇನ ಮರಣಂ* ಅಂದರೆ ನಮ್ಮ ಅಂತ್ಯಕಾಲದಲ್ಲಿ ಯಾವುದೇ ತೊಂದರೆಯಿಲ್ಲದೆ ಸಾಯಬೇಕು ಮತ್ತು ಅನಾರೋಗ್ಯಕ್ಕೆ ಒಳಗಾದ ನಂತರ ಎಂದಿಗೂ ಹಾಸಿಗೆಯ ಮೇಲೆ ಬೀಳಬಾರದು, ದುಃಖದಿಂದ ಸಾಯಬಾರದು ಮತ್ತು ನಾವು ನಡೆದಾಡುವಾಗಲೇ ನಮ್ಮ  ಜೀವನದ ಅಂತ್ಯ ಆಗಬೇಕು.
ವಿನಾ ದೈನೇನ ಜೀವನಂ ಅಂದರೆ ಎಂದಿಗೂ ಯಾರೊಂದಿಗೂ ಪರಾವಲಂಬಿಯಾಗಿ ಜೀವನ ಇರಬಾರದು. ಒಬ್ಬ ವ್ಯಕ್ತಿಯು ಪಾರ್ಶ್ವವಾಯುವಿಗೆ ಒಳಗಾದಾಗ ಇತರರ ಮೇಲೆ ಅವಲಂಬಿತನಾಗುವಂತೆ,  ಅಥವಾ ಅಸಹಾಯಕನಾಗಿರಬಾರದು.  ದೇವರ ಕೃಪೆಯಿಂದ ಭಿಕ್ಷೆ ಬೇಡದೆ ಜೀವನ ನಡೆಸಬಹುದು.
ದೇಹಾಂತ ತವ ಸಾನಿಧ್ಯಮ್ ಅಂದರೆ ಸಾವು ಬಂದಾಗ ದೇವರು ಮುಂದೆ ಇರಬೇಕು.  ಭೀಷ್ಮ ಪಿತಾಮರ ಮರಣದ ಸಮಯದಲ್ಲಿ, ದೇವರು (ಕೃಷ್ಣ ) ಅವರ ಮುಂದೆ ನಿಂತಿದ್ದರು.  ಅವನನ್ನು ನೋಡಿ ಪ್ರಾಣ ಬಿಟ್ಟರು
 ದೇಹಿಮೇ ಪರಮೇಶ್ವರ.
ಅಂದರೆ ಓ ದೇವರೇ, ನಮಗೆ ಅಂತಹ ವರವನ್ನು ನೀಡು. 

* ದೇವರನ್ನು ಪ್ರಾರ್ಥಿಸುವಾಗ ಮೇಲಿನ ಶ್ಲೋಕವನ್ನು ಪಠಿಸಿ. * ಕಾರು, ಬಂಗಲೆ, ಹುಡುಗ, ಹುಡುಗಿ, ಗಂಡ, ಹೆಂಡತಿ, ಮನೆ, ಹಣ ಇತ್ಯಾದಿಗಳನ್ನು ಕೇಳಬೇಡಿ (ಸಂಸಾರಿಕ ವಿಷಯಗಳು), ಈ ಅರ್ಹತೆಯು ನಿಮ್ಮ ಅರ್ಹತೆಗೆ ಅನುಗುಣವಾಗಿ ಈ ದೇವರು ನಿಮಗೆ ನೀಡುತ್ತಾನೆ.  ಅದಕ್ಕಾಗಿಯೇ ದರ್ಶನ ಮಾಡಿದ ನಂತರ ಪ್ರತಿಯೊಬ್ಬರು ಈ ಪ್ರಾರ್ಥನೆಯನ್ನು ಕುಳಿತು ಪ್ರಾರ್ಥಿಸಬೇಕು.  ಇದು ಪ್ರಾರ್ಥನೆ, ವಿಜ್ಞಾಪನೆ ಅಲ್ಲ.  ವಿಜ್ಞಾಪನೆಯು ಲೌಕಿಕ ವಿಷಯಗಳಿಗಾಗಿ.  ಉದಾಹರಣೆಗೆ, ಮನೆ, ವ್ಯವಹಾರ, ಉದ್ಯೋಗ, ಮಗ, ಮಗಳು, ಲೌಕಿಕ ಸುಖಗಳು, ಸಂಪತ್ತು ಅಥವಾ ಇತರ ವಿಷಯಗಳಿಗಾಗಿ, ಬೇಡಿಕೆಯಿಡುವುದು.

      'ಪ್ರಾರ್ಥನೆ' ಎಂಬ ಪದದ ಅರ್ಥ 'ಪ್ರಾ' ಎಂದರೆ 'ವಿಶೇಷ', ವಿಶಿಷ್ಟ, ಉತ್ತಮ ಮತ್ತು 'ಆರ್ಥನಾ' ಎಂದರೆ ವಿನಂತಿ.  ಪ್ರಾರ್ಥನೆ ಎಂದರೆ ವಿಶೇಷ ವಿನಂತಿ. *

           ದೇವಾಲಯದಲ್ಲಿ ದೇವರ ದರ್ಶನವನ್ನು ಯಾವಾಗಲೂ ತೆರೆದ ಕಣ್ಣುಗಳಿಂದ ಮಾಡಬೇಕು.  ಕೆಲವರು ಕಣ್ಣು ಮುಚ್ಚಿಕೊಂಡು ಅಲ್ಲಿ ನಿಲ್ಲುತ್ತಾರೆ.  ಏಕೆ ನಮ್ಮ ಕಣ್ಣುಗಳನ್ನು ಮುಚ್ಚಬೇಕು? ನಾವು ದೇವರ ದರ್ಶನಕ್ಕೆ ಬಂದಿದ್ದೇವೆ.  ದೇವರ ಸ್ವರೂಪವನ್ನು, ಪಾದಗಳಿಂದ ಮುಖದವರೆಗಿನ ಸೌಂದರ್ಯದ ಪೂರ್ಣ ಆನಂದವನ್ನು ಪಡೆಯಿರಿ. ನಿಮ್ಮ ಕಣ್ಣುಗಳನ್ನು ದೇವರ ನ್ವರೂಪದಿಂದ ತುಂಬಿಸಿ. 

       * ನೀವು ದರ್ಶನದ ನಂತರ ಹೊರಗೆ ಕುಳಿತಾಗ, ನಂತರ ನೀವು ಕಣ್ಣುಗಳನ್ನು ಮುಚ್ಚಿಕೊಂಡು ನೋಡಿದ ಸ್ವರೂಪವನ್ನು ಧ್ಯಾನಿಸಿ.             
ಇದನ್ನು ನಿಮ್ಮ ಆಪ್ತರಿಗೆ ಶೇರ್ ಮಾಡಿ.

ಶುಭ ವಿವಾಹ Shubha Vivaha

  ಶುಭ ವಿವಾಹ ಒಂದು ಸಣ್ಣ ಕತೆ .

shubha vivaha
ಶುಭ ವಿವಾಹ


ವಿವಾಹ ಸಮಾರಂಭ ನಡೆಯುತ್ತಿತ್ತು.  ಪುರೋಹಿತರು ವೇದಿಕೆಯ ಮೇಲೆ ನಿಂತು ಹೇಳಿದರು :- ಈ ಮದುವೆಗೆ ಯಾರಾದರೂ ಆಕ್ಷೇಪಣೆ ಹೊಂದಿದ್ದರೆ, ತಕ್ಷಣ ಮುಂದೆ ಬನ್ನಿ.  ಆಮೇಲೆ ಮದುವೆಯಾದ ನಂತರ ಗಂಡ ಹೆಂಡತಿ ನಡುವೆ ಜಗಳ ಬೇಡ.. ಈಗೀನ ಆಧುನಿಕ ಕಾಲದಲ್ಲಿ ಸಣ್ಣಪುಟ್ಟ ವಿಷಯಗಳಿಗೂ ಡೈವೋರ್ಸ್ ಆಗುತ್ತವೆ..  ಆಗ ಇಬ್ಬರ  ಜೀವನವೂ  ಹಾಳು..  ಯಾರಾದರೂ ಏನಾದರು ಹೇಳುವುದಿದ್ದರೆ  ಮುಂದೆ ಬಂದು,  ಈ ಮದುವೆಗೆ ಏನಾದರೂ ತಕಾರಾರು ಇದ್ದರೆ ಹೇಳಿ.."  ಎಂದು ಹೇಳಿ ಸುಮ್ಮನಾದರು.


ಆಗ ಕಿಕ್ಕಿರಿದು ತುಂಬಿದ್ದ ಮದುವೆ ಮಂಟಪದಲ್ಲಿ ಹಿಂದೆ ನಿಂತಿದ್ದ ಸುಂದರ ಯುವತಿಯೊರ್ವಳು ತನ್ನ ಮಡಿಲಲ್ಲಿ ಒಂದು ಮಗುವಿನೊಂದಿಗೆ ಮುಂದೆ ಬಂದಳು ..!! 

ಆಗ ಎಲ್ಲರೂ ಒಬ್ಬರನ್ನೊಬ್ಬರು ಮುಖ ಮುಖ ನೋಡಿಕೊಂಡರು, ಗುಸುಗುಸು ಪಿಸುಪಿಸು ಶುರುವಾಯ್ತು.. ಎಲ್ಲರ ಸಂಶಯ ನೋಟ ವರನ ಮೇಲೆ ಬಿತ್ತು.. 

ಗುಂಪಿನಲ್ಲಿ ಕೆಲವರು  ನಗಲು ಪ್ರಾರಂಭಿಸಿದರು.. ವೇದಿಕೆಯ ಮೇಲೆ ನಿಂತಿದ್ದ ವಧು ವರನಿಗೆ ಸಿಟ್ಟಿನಿಂದ  ಕಪಾಳಮೋಕ್ಷ ಮಾಡಿದಳು .. ವಧುವಿನ ತಂದೆ ಬಂದೂಕು ತರಲು ಓಡಿಹೋದರು .... ವಧುವಿನ ಸಹೋದರರು ವರನನ್ನು ಹಿಡಿದು ಹಿಗ್ಗಾಮುಗ್ಗ  ತದುಕಿದರು.... ಇವೆಲ್ಲವನ್ನೂ ನೋಡಿ ವಧುವಿನ ತಾಯಿ ಪ್ರಜ್ಞೆ ತಪ್ಪಿ ಬಿದ್ದು ಬಿಟ್ಟರು..!! 

ಇಡೀ ಮದುವೆ ಮಂಟಪದಲ್ಲಿ ಭೀಕರ ಮೌನ, ಭಯ,  ಆತಂಕ ಮೂಡಿತು......


ಆ ಸಮಯದಲ್ಲಿ ಪುರೋಹಿತರು ಆ ಯುವತಿಯನ್ನು  ಕೇಳಿದರು : "ಹೇಳು ತಾಯಿ ಈ ಮದುವೆಯಿಂದ ನಿನಗೆ ಏನು ಸಮಸ್ಯೆ ಇದೆ..!?"


ಆಗ ಆ ಯುವತಿ ಹೇಳಿದಳು :  ಸ್ವಾಮಿ.... ನಿಮ್ಮ ಮಾತು ಹಿಂದೆ ನಿಂತಿದ್ದ ನನಗೆ  ಸರಿಯಾಗಿ ಕೇಳುತ್ತಿಲ್ಲ .. ಅದಕ್ಕಾಗಿಯೇ ನಾನು ಮುಂದೆ ಬಂದಿದ್ದೇನೆ!!"

 

ಸುಲಗ್ನಾ ಸಾವಧಾನ!!

ಚಿಂದಿ ಚಿತ್ರಾನ್ನ

ಚಿಂದಿ ಚಿತ್ರಾನ್ನ

chindi chitranna
ಚಿಂದಿ ಚಿತ್ರಾನ್ನ


ಹಾಸ್ಟೆಲ್ ಒಂದ್ರಲ್ಲಿ ಪ್ರತಿದಿನ ಚಿತ್ರಾನ್ನಾನೇ ತಿಂದು ತಿಂದು ಬೇಜಾರಾಗಿ 80 ವಿದ್ಯಾರ್ಥಿಗಳು ಹಾಸ್ಟೆಲ್ ವಾರ್ಡನ್‌ಗೆ ಪ್ರತಿದಿನವೂ ಬೇರೆ ಬೇರೆ ಥರದ್ ಟಿಫನ್ ಮಾಡೋಕೆ ಹೇಳದ್ರು.

ಆದರೆ 100 ರಲ್ಲಿ 20 ಜನರಿಗೆ ಮಾತ್ರ ಪ್ರತಿದಿನ ಚಿತ್ರಾನ್ನಾನೇ ಬೇಕಾಗಿತ್ತು, ಆದರೆ ಉಳಿದ 80 ಜನಕ್ಕೆ ಅದು ಬೇಕಾಗಿರಲಿಲ್ಲ. ಅವರಿಗೆ ಬಗೆಬಗೆಯ ಉಪಹಾರ ಬೇಕಾಗಿತ್ತು.

ಆಗ ವಾರ್ಡನ್ ವೋಟಿಂಗ್ ಮಾಡೋಣ, ಯಾರ ಪರವಾಗಿ ಹೆಚ್ಚು ವೋಟ್ ಬರುತ್ತೋ ಅದೇ ಮಾಡೋಣಾಂತ ತೀರ್ಮಾನಿಸಿದರು.
 
ಯಾವ 20 ವಿದ್ಯಾರ್ಥಿಗಳಿಗೆ ಚಿತ್ರಾನ್ನ ಇಷ್ಟ ಇತ್ತೋ ಅವರು ಚಿತ್ರಾನ್ನಕ್ಕೇ ವೋಟ್ ಹಾಕಿದ್ರು.
       
ಉಳಿದ 80 ಜನ ವಿದ್ಯಾರ್ಥಿಗಳು ಮಾತ್ರ ಒಂಚೂರೂ ಯೋಚನೆ ಮಾಡದೆ ತಮಗಿಷ್ಟವಾದ ಉಪಹಾರಗಳ ಬಗ್ಗೆ ಜಗಳವಾಡೋಕೆ ಶುರು ಮಾಡದ್ರು. ತಮ್ಮ ಬುದ್ದಿ, ವಿವೇಚನೆಗೆ ಕೆಲಸ ಕೊಡಲೇ ಇಲ್ಲ.. ತಮಗಿಷ್ಟವಾಗೋ ಉಪಹಾರಗಳಿಗೆ ವೋಟ್ ಮಾಡೋಕೆ ಶುರು ಮಾಡದ್ರು
            

ಈಗ ಯೋಚನೆ ಮಾಡಿ ಏನಾಗಿರಬಹುದೂಂತ?

 ಆ ಹಾಸ್ಟೆಲ್ಲಿನ ಕ್ಯಾಂಟಿನ್ ‌ನಲ್ಲಿ ಈಗಲೂ ಆ 80 ವಿದ್ಯಾರ್ಥಿಗಳಿಗೆ ಚಿತ್ರಾನ್ನಾನೇ ಗತಿಯಾಗಿದೆ. ಯಾಕಂದ್ರೆ ಉಳಿದ ಆ 20 ವಿದ್ಯಾರ್ಥಿಗಳು ಒಗ್ಗಟ್ಟಾಗಿದ್ರು.

ಪಾಠ: ಎಲ್ಲಿಯವರೆಗೆ 80% ಜನ ಮತ್ತೊಂದು ದಿಕ್ಕಿನಲ್ಲಿ ದಿಕ್ಕಾಪಾಲಾಗಿರ್ತೀರೋ ಅಲ್ಲಿವರೆಗೂ 20% ಜನಗಳದ್ದೇ ಆಟ ನಡಿಯತ್ತೆ

ಹಿಂದುಗಳೆಲ್ಲ ಒಗ್ಗಟ್ಟಾಗಿ, ಉತ್ತಮರಾಗಿ, ಶಿಕ್ಷಿತರಾಗಿ, ಸಂಘಟಿತರಾಗಿ ಇಲ್ಲಾಂದ್ರೆ ಚಿತ್ರಾನ್ನಾನೇ ಆಗ್ತೀರ.

ಮಾನವೀಯತೆಯ ಕಥೆ

ಹರಿದುಹೋದ ಧೋತಿ ಮತ್ತು ಹರಿದ ಅಂಗಿಯನ್ನು ಧರಿಸಿದ ವ್ಯಕ್ತಿ ತನ್ನ 15-16 ವರ್ಷದ ಮಗಳ ಜೊತೆ 
ದೊಡ್ಡ ಹೋಟೆಲ್ ಗೆ ಹೋದರು. ಇಬ್ಬರೂ ಕುರ್ಚಿಯ ಮೇಲೆ ಕುಳಿತಿದ್ದನ್ನು ನೋಡಿ , ವೇಟರ್ ಬಂದು ಎರಡು ನೀರಿನ  ಲೋಟ ಇಟ್ಟು ಕೇಳಿದ. ತಮಗೇನು ಬೇಕು? ಆಗ ಆ ವ್ಯಕ್ತಿ
" ನನ್ನ ಮಗಳಿಗೆ ಹತ್ತನೇ ತರಗತಿಯಲ್ಲಿ ಜಿಲ್ಲೆಗೆ ಪ್ರಥಮ ಬಂದರೆ ನಗರದ ಅತಿದೊಡ್ಡ ಹೋಟೆಲ್ ನಲ್ಲಿ ದೋಸೆ ತಿನ್ನಿಸುತ್ತೇನೆ ಎಂದು ಭರವಸೆ ನೀಡಿದ್ದೆ.
ಮಾನವೀಯತೆಯ ಕಥೆ
ಮಾನವೀಯತೆಯ ಕಥೆ 

ಇದು  ಆ ಭರವಸೆಯನ್ನು ನನ್ನ  ಮಗಳು ಈಡೇರಿಸಿದ್ದಾಳೆ. ದಯವಿಟ್ಟು ಮಗಳಿಗಾಗಿ ಒಂದು ದೋಸೆ ತನ್ನಿ. ? ವೇಟರ್ ಕೇಳಿದ " ಆಯಿತು ತಮಗೇನು ತರಬೇಕು?"   ನನ್ನ ಬಳಿ ಕೇವಲ ಒಂದು ದೊಸೆ ಸಾಕಾಗುವಷ್ಟು ಮಾತ್ರ ಹಣವಿದೆ ಅವಳಿಗಷ್ಟೆ ಕೊಟ್ಟರೆ ಸಾಕು.ಎಂದ.ಈ  ಮಾತು ಕೇಳಿ ವೇಟರ್ ನ ಮನಸು ಕರಗಿತು. ಮಾಲೀಕನ ಬಳಿ ಹೋಗಿ   ಅವನು ವ್ಯಕ್ತಿ ಮತ್ತು ಮಗಳ ಕಥೆ ಹೇಳಿದ.ಮುಂದುವರಿದು ಇವರಿಬ್ಬರಿಗೂ ನನ್ನ ಪರವಾಗಿ ತಿಂಡಿ  ನೀಡಬೇಕೆಂದು ನಿರ್ಧರಿಸಿದ್ದೇನೆ.  ನೀವು ಅವರ ಬಿಲ್ ಹಣವನ್ನು ನನ್ನ ಸಂಬಳದಿಂದ ಕಡಿತಗೊಳಿಸಬಹುದು. ಈ ಮಾತನ್ನು ಕೇಳಿದ ಹೊಟೆಲ್ ಮಾಲಿಕನಿಗೂ ಅವರಿಬ್ಬರ ಮೇಲೆ ಮರುಕವಾಯಿತು ಹಾಗೂ ವೆಯ್ಟರ್ ನ ಅಭಿಮಾನ ಕಂಡು  ಸಂತುಷ್ಟನಾಗಿ "ಅವರಿಬ್ಬರಿಗೆ  ಹೋಟೆಲ್ ಪರವಾಗಿ ಇಂದು ನಾವು ಅಭಿನಂದನಾ ಪಾರ್ಟಿ ಕೊಡೋಣ ಎಂದು ಮಾಲೀಕರು ಹೇಳಿದರು".  
ಹೋಟೆಲ್ ಮಾಲೀಕರು ಎಲ್ಲ ಸಿಬ್ಬಂದಿಯವರನ್ನು ಸೇರಿಸಿ ಟೇಬಲ್ ನ್ನು ಚೆನ್ನಾಗಿ ಅಲಂಕರಿಸಲು ಹೇಳಿದರು.ಹಾಗೂ ಬಡ ಹುಡುಗಿಯ ಯಶಸ್ಸನ್ನು ಗ್ರಾಹಕರೊಂದಿಗೆ ಸಂಭ್ರಮಿಸಿ ಅವರಿಬ್ಬರಿಗೆ ಹೊಟ್ಟೆ ತುಂಬುವಷ್ಟು ತಿಂಡಿ  ಹಾಗೂ ಸಿಹಿ ಹಂಚಿ ಆಚರಿಸಿದರು.ಜೊತೆಗೆ ಮಾಲೀಕರು   ದೊಡ್ಡ ಚೀಲದಲ್ಲಿ  ಸಿಹಿ ತಿಂಡಿ ಪ್ಯಾಕ್ ನೀಡಿ ತಮ್ಮ ನೆರೆಹೊರೆಯಲ್ಲಿ ಹಂಚಲು  ಕೊಟ್ಟರು. ಇಷ್ಟೆಲ್ಲಾ ಗೌರವ ಪಡೆದ ಅವರಿಗೆ ಹೊಟೆಲ ನವರ ಬಗ್ಗೆ ಧನ್ಯತಾಭಾವದಿಂದ ಕಣ್ಣಲ್ಲಿ ನೀರು ಜಿನುಗತೊಡಗಿತ್ತು.                                                        .
ಸಮಯ ಕಳೆಯಿತು. ಒಂದು ದಿನ ಅದೇ ಹುಡುಗಿ I.A.S. ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಅದೇ ಊರಿಗೆ ಬಂದಳು. ಮೊದಲು ಆಪ್ತ ಸಹಾಯಕನನ್ನು ಅದೇ ಹೋಟೆಲ್ ಗೆ ಕಳುಹಿಸಿ, "ಕಲೆಕ್ಟರ್ ಸಾಹಿಬಾ" ತಿಂಡಿ ತಿನ್ನಲು ಬರುತ್ತಾರೆ ಎಂದು ಹೊಟೆಲ್ ಮಾಲಿಕರಿಗೆ ತಿಳಿಸುವಂತೆ ಹೇಳಿದರು. ಹೋಟೆಲ್ ಮಾಲೀಕರು ತಕ್ಷಣ  ಹೊಟೆಲ್ ಹಾಗೂ ಟೇಬಲ್ ಗಳನ್ನು ತಮ್ಮ ಸಹಾಯಕರ  ಸಹಾಯದಿಂದ ಸುಂದರವಾಗಿ ಅಲಂಕರಿಸಿದರು. ಈ ಸುದ್ದಿ ಕೇಳಿ ಇಡೀ ಹೋಟೆಲ್ ಗ್ರಾಹಕರಿಂದ ತುಂಬಿ ತುಳುಕಿತು.
ಕಲೆಕ್ಟರ್ ತನ್ನ ಪೋಷಕರೊಂದಿಗೆ ಹೋಟೆಲ್ ತಲುಪಿದರು.  ಎಲ್ಲರೂ ಅವರ ಗೌರವಕ್ಕೆ ನಿಂತರು. ಹೋಟೆಲ್ ಮಾಲೀಕರು ಅವರಿಗೆ ಪುಷ್ಪಗುಚ್ಛ ನೀಡಿ ಸ್ವಾಗತಿಸಿದರು.  ಅವಳು ನೇರವಾಗಿ  ಹೋಟೆಲ್ ಮಾಲೀಕ ಮತ್ತು ವೆಟರ್ ನ ಕಾಲಿಗೆ  ನಮಸ್ಕರಿಸಿ ಹೇಳಿದಳು - ' ಬಹುಶಃ ನೀವಿಬ್ಬರೂ ನನ್ನನ್ನು ಗುರುತಿಸಲಿಲ್ಲ. ದೋಸೆ ಕೊಡೋಕೆ ಅಪ್ಪನ ಬಳಿ ದುಡ್ಡಿಲ್ಲದ ಹುಡುಗಿ ನಾನು. ಆ ದಿನ ನೀವಿಬ್ಬರೂ ಮಾನವೀಯತೆಯು ಇನ್ನೂ ಇದೆ ಎನ್ನುವದಕ್ಕೆ ನೈಜ  ಉದಾಹರಣೆ ಕೊಟ್ಟಿದ್ದಿರಿ. ನನ್ನ ನೆರೆಹೊರೆಗೆ ಹಂಚಲು ಸಿಹಿತಿಂಡಿಯ ಪ್ಯಾಕ್  ನೀಡಿ ಗೌರವಿಸಿದ್ದಿರಿ.
 ನಿಮ್ಮಿಬ್ಬರಿಂದಲೇ ಇಂದು ನಾನು ಈ ಹಂತಕ್ಕೆ ಬರಲು ಪ್ರಯತ್ನ ಪಟ್ಟೆ . ನಾನು ನಿಮ್ಮಿಬ್ಬರನ್ನು ಯಾವಾಗಲೂ  ನೆನಪಿನಲ್ಲಿಟ್ಟುಕೊಳ್ಳುತ್ತೇನೆ. ಇವತ್ತು ಈ ಪಾರ್ಟಿ ನನ್ನಿಂದ. ಎಲ್ಲಾ ಗ್ರಾಹಕರು ಮತ್ತು ಹೋಟೆಲ್ ಸಿಬ್ಬಂದಿಗಳ ಬಿಲ್ ನಾನು ಕಟ್ಟುತ್ತೇನೆ.  ಇವತ್ತಿನಿಂದ ನಿಮ್ಮಿಬ್ಬರ ಸುಖ ದುಃಖಗಳಿಗೆ ನಾನೂ ಭಾಗಿ.ಎಂದು ಹೇಳಿದಳು.ಇವತ್ತು ಹೊಟೆಲ್ ಮಾಲಿಕ  ಹಾಗೂ ವೆಯ್ಟರನ ಕಣ್ಣುಗಳು ತೆವ ವಾಗಿದ್ದವು.     
                                    *ಯಾವುದೇ ಬಡವರ ಬಡತನವನ್ನು ನೋಡಿ ಅಪಹಾಸ್ಯ ಮಾಡುವ ಬದಲು, ಅವರ ಪ್ರತಿಭೆಯನ್ನು ಸರಿಯಾಗಿ ಗೌರವಿಸಿದರೆ ಆ ಸಂತೃಪ್ತ ಭಾವ ಅವರಲ್ಲಿ ಯಾವತ್ತೂ ಹಚ್ಚಹಸುರನಾಗಿ ಇರುತ್ತದೆ.*  

ವಾತಾವರಣದಲ್ಲಿಯ ಘಟಕಗಳು Composition Of Atmosphere

 ಪೃಥ್ವಿಯ ಸುತ್ತಲೂ ಅನೇಕ ವಾಯುಗಳ ಆವರಣವಿದೆ. ವಾಯುಗಳ ಆವರಣವನ್ನು ವಾತಾವರಣ ಎಂದು ಹೇಳುತ್ತಾರೆ. ಪ್ರಾರಂಭದಿಂದ ಪೃಥ್ವಿಯ ಆಕಾರವು ಈಗಿನ ಅದರ ಆಕಾರಕ್ಕಿಂತ ದೊಡ್ಡದಾಗಿತ್ತು. ಮತ್ತು ಅದರ ಉಷ್ಣತಾಮಾನವು  ಸದ್ಯಕ್ಕಿoತಲೂ ಕಡಿಮೆ ಇತ್ತು. ಆ ಸಮಯದಲ್ಲಿ ಅದರ ಸುತ್ತಲೂ ವಾತಾವರಣ ಇರಲಿಲ್ಲ. ಆನಂತರ ಪೃಥ್ವಿ ಆಕುಂಚನವಾಗಲು ಪ್ರಾರಂಭಿಸಿತು. ಆದ್ದರಿಂದ ಹಾಗೆ ಅದರ ಆಕಾರವು ಚಿಕ್ಕದಾಗುತ್ತಾ ಮತ್ತು ಉಷ್ಣತಾಮಾನವು ಹೆಚ್ಚಾಗುತ್ತಾ ಹೋಯಿತು. ಈ ಕಾಲಾವಧಿಯಲ್ಲಿ ಮುಕ್ತವಾದ ವಾಯು ಗಳಿಂದ ವಾತಾವರಣ ನಿರ್ಮಿಸಲ್ಪಟ್ಟಿತು. ವಾತಾವರಣದಲ್ಲಿಯ ವಾಯುಗಳ ಪ್ರಮಾಣವು ಸ್ಥಿರವಾಗಿರದೆ. ಪೃಥ್ವಿಯ ಮೇಲಾಗುವ ಅನೇಕ ಘಟನೆಗಳಿಂದಾಗಿ ವಾತಾವರಣವು ಪ್ರದೂಷಿತಗೊಳ್ಳುತ್ತದೆ. ಪ್ರದೂಷಣೆಯ ಕಾರಣಗಳನ್ನು ಶೋಧಿಸಿ ಪ್ರದೂಷಣೆಯನ್ನು ಕಡಿಮೆ ಮಾಡಲು ಪ್ರಯತ್ನ ಮಾಡಲು ಬರುತ್ತದೆ. 
Composition Of Atmosphere
 Composition Of Atmosphere

ವಾತಾವರಣದಲ್ಲಿಯ ಘಟಕಗಳು Composition Of Atmosphere
ಪೃಥ್ವಿಯ ಪೃಷ್ಠಭಾಗದಿಂದ ಅಂದಾಜು 40 ಕಿ.ಮೀ.ಎತ್ತರದವರೆಗೆ ವಾತಾವರಣವು ಆವರಿಸಿದೆ. 1000 ಕಿ.ಮೀ. ಮೇಲೆಯೂ ಕೂಡಾ ಹವೆಯ ಅಸ್ತಿತ್ವವನ್ನು ನಿರೀಕ್ಷಿಸಲಾಗಿದೆ ಪ್ರಿಟಿವಿಯ ಪ್ರಿಸ್ಟೇಭಾಗದಲ್ಲಿರುವ ವಾತಾವರಣವು ಮುಖ್ಯವಾಗಿ ನೈಟ್ರೋಜನ್ ಮತ್ತು ಆಕ್ಸಿಜನ್ ಎಂಬ ವಾಯುಗಳಿಂದ ಕೂಡಿರುವುದು. ಅದಲ್ಲದೆ ವಾತಾವರಣವು ಅಲ್ಪ ಪ್ರಮಾಣದಲ್ಲಿ ಕಾರ್ಬನ್-ಡೈ-ಆಕ್ಸೈಡ್, ನೀರಾವರಿಗಳ ಜೊತೆಗೆ ನಿಷ್ಕ್ರಿಯ ವಾಯುಗಳಾದ ಅರ್ಗಾನ್, ನಿಯಾನ್,ಕ್ರಿಪ್ಟನ್ ,ಝೇನಾನ್ ಮತ್ತು ಧೂಲಿಕಣಗಳಿಂದ ಸಮಾವೇಶಗೊಂಡಿದೆ. ನೀರಿನ ಮತ್ತು ಧೂಳಿನ ಕಣಗಳನ್ನು ಬಿಟ್ಟು ಉಳಿದ ವಾಯುಗಳ ಪ್ರಮಾಣವು ಸಾಮಾನ್ಯವಾಗಿ ಎಲ್ಲ ಕಡೆಗೂ ಒಂದೇ ರೀತಿಯಲ್ಲಿ ಇರುತ್ತದೆ.ಪೃಥ್ವಿಯ ಪೃಷ್ಠಭಾಗದಿಂದ ಮೇಲೆ ಹೋದಂತೆ ನೀರಾವಿ ಮತ್ತು ಧೂಳಿಕಣ ಇವುಗಳ ಪ್ರಮಾಣವು ಕಡಿಮೆಯಾಗುತ್ತ ಹೋಗುತ್ತದೆ.ಸುಮಾರು 10 ರಿಂದ 12 ಕಿ.ಮೀ. ಅಂತರದ ಮೇಲೆ ವಾತಾವರಣದಲ್ಲಿ ನೀರಿನ ಆವಿಯು ಇರುವುದೇ ಇಲ್ಲ. ಹಾಗೆಯೇ ಪ್ರಿಥ್ವಿಯಿಂದ ದೂರ ಹೋದಂತೆ ವಾತಾವರಣದಲ್ಲಿಯ ಧೂಲಿಕಣದ ಪ್ರಮಾಣವು ಕಡಿಮೆಯಾಗುತ್ತಾ ಹೋಗುತ್ತದೆ.ಪೃಥ್ವಿಯ ಮೇಲಿರುವ ವಾತಾವರಣದಲ್ಲಿಯ ಸ್ಥಿರವಾದ ಘಟಕಗಳ ಪ್ರಮಾಣವು ಈ ಕೆಳಗಿನ ಕೋಷ್ಟಕದಲ್ಲಿ ಕೊಡಲಾಳಗಿದೆ.
ವಾಯು                                   ಸೂತ್ರ          ಶೇಕಡಾ ಪ್ರಮಾಣ(%)
ನೈಟ್ರೋಜೆನ್                             N2                78.084
ಆಕ್ಸಿಜನ್                                   O2                 20.946
ಅರ್ಗಾನ್                                   Ar                  0.934
ಕಾರ್ಬನ್-ಡೈ-ಆಕ್ಸೈಡ್             CO2               0.63
ನಿಯಾನ್                                   Ne                 0.000018
ಹೀಲಿಯಮ್                              He                 0.0000052
ಮಿಥೇನ್                                    CH4              0.0000020
ಕ್ರಿಪ್ಟಾನ್                                     Kr                 0.0000014
ಹೈಡ್ರೋಜೆನ್                              H2                0.0000005
ನೈಟ್ರಸ್ ಆಕ್ಸೈಡ್                       N2O              0.0000005
ಝೇನಾನ್                                  Xe                 0.00000008

ಪೃಥ್ವಿಯ ಪೃಷ್ಠಭಾಗದಿಂದ ಸುಮಾರು 16 ಕಿ.ಮೀ.  ಅಂತರದ ಮೇಲೆ ಸೂರ್ಯನ ಕಿರಣಗಳಿಂದ ಆಕ್ಸಿಜನವು ಓಝೋನ್ ಆಗಿ ರೂಪಾಂತರವಾಗುತ್ತದೆ. ಓಝೋನ್ ನ ಅಣು (O3) ಆಕ್ಸಿಜನದ ಮೂರೂ ಪರಮಾಣುಗಳಿಂದಾಗಿರುತ್ತದೆ. ಓಝೋನದ ಪ್ರಮಾಣವು ಪೃಥ್ವಿಯಿಂದ 16 ಕಿ.ಮೀ.ದಿಂದ 23 ಕಿ.ಮೀ.ಅಂತರದವರೆಗೆ ಹೆಚ್ಚಾಗುತ್ತದೆ. ಪೃಥ್ವಿಯಿಂದ ಸುಮಾರು 23 ಕಿ.ಮೀ. ಅಂತರದ ಮೇಲೆ ಓಝೋನ್ ನ ಥರವು ದಟ್ಟವಾಗಿರುತ್ತದೆ. ಸೂರ್ಯನಿಂದ ಬಿಡುಗಡೆಯಾಗುವ ಹಾನಿಕಾರಕ ಅಲ್ಟ್ರಾ- ವಾಯ್ಲೆಟ್ ಕಿರಣಗಳನ್ನು ಈ  ಓಝೋನ್ ದ ದಟ್ಟ ಥರವು ಹೀರಿಕೊಳ್ಳುವುದರಿಂದ ಅದು ಬಹಳ ಮಹತ್ವದಾಗಿದೆ.

ನಿಮಗಿದು ಗೊತ್ತೇ

ನಿಮಗಿದು ಗೊತ್ತೇ 



Email - ಮಿಂಚೆ / ಮಿಂಚೋಲೆ / ಮಿಂಚಂಚೆ.
Smart phone - ಜಾಣುಲಿ.
Mobile/Cell phone - ಜಂಗಮವಾಣಿ / ಅಲೆಯುಲಿ.
Ringtone -          ಕರೆ ಸದ್ದು.
Camera - ತಿಟ್ಟುಕ / ಬಿಂಬಗ್ರಾಹಿ.
Photo - ನೆರಳುತಿಟ್ಟ.
Xerox - ನೆರಳಚ್ಚು/ ಚಿತ್ರ ಪ್ರತಿ.
Laptop - ಮಡಿಲೆಣ್ಣುಕ / ತೊಡೆಗಣಕ.
Keyboard - ಕೀಲಿಮಣೆ / ಬೆರಳಚ್ಚುಮಣೆ.
Internet - ಮಿಂಬಲೆ.
Website - ಮಿಂಬಲೆತಾಣ / ಜಾಲತಾಣ.
Network - ಜಾಲಬಂಧ / ನೆಲುಹು.
Online - ಮಿನ್ನೇರ.
Download - ನಕಲಿಳಿಸು.
Video - ಓಡುತಿಟ್ಟ.
Carrot - ಕೆಂಬೇರು.
Radio - ಬಾನುಲಿ / ಬಾನ್ನುಡಿ.
Fan - ಪಂಕ/ ಬೀಸಣಿಕೆ.
Refrigerator - ಮಂಜುಪೆಟ್ಟಿಗೆ / ಕುಳಿರರೆ / ಶೀತಕ.
Bicycle - ತುಳಿಬಂಡಿ / ಕಾಲ್ಗಾಲಿ.
Car - ಚಕ್ಕಡಿ
Bus - ಮಂದಿ ಬಂಡಿ/ಜನಬಂಡಿ
Ambulance - ಮದ್ದುಬಂಡಿ.
Traffic - ಒಯ್ಯಾಟ / ಸಾಗಾಟ.
License - ಪರವಾನಗಿ / ಸನ್ನದು.
Apartment - ಕೂಡುಮನೆ.
Tomato - ತಕ್ಕಾಳಿ / ಗೂದೆಹಣ್ಣು.
Beetroot - ಕಂದುಬೇರು.
Ice cream - ಕೆನೆಮಂಜು.
Cold - ಕುಳಿರು.
Doctor - ಮಾಂಜುಗ.
Medicine - ಮಾಂಜರಿಮೆ.
Science - ಅರಿಮೆ.
Dream - ಕನಲು/ಕನಸು
College - ಉನ್ನತ ಶಿಕ್ಷಣ ಶಾಲೆ / ಪೆರ್ಕಲಿಮನೆ.
Engineer - ಬಿಣಿಗೆಯರಿಗ / ಅಭಿಯಂತರ.
Police - ಕಾಪುಗ.
Button- ಒತ್ತುಗುಂಡಿ.
Electricity- ವಿದ್ಯುತ್ತು
Elucidate- ಬೆಳಕು 
Elastic- ಹಿಗ್ಗಲುದಾರ/ ಹಿಗ್ಗಲುಬಟ್ಟೆ 
Elect- ಆಯ್ದ / ಹೆಕ್ಕಿತೆಗೆದ / ಆರಿಸಿಕೊಂಡ 









.







*"ಉಪ್ಪಿಗಿಂತ ರುಚಿಯಿಲ್ಲ; ತಾಯಿಗಿಂತ ಬಂಧುವಿಲ್ಲ."*

Mom is Wow
 

"ಯತ್ರ ನಾರ್ಯಸ್ತು ಪೂಜ್ಯಂತೇ ರಮಂತೇ ತತ್ರ ದೇವತಾಃ."


ಎಲ್ಲಿ ನಾರಿಯರನ್ನು ಪೂಜಿಸಲಾಗುತ್ತದೆಯೋ ಅಲ್ಲಿ ದೇವತೆಗಳು ವಾಸಿಸುತ್ತಾರೆ‌ ಎಂಬುದು ಅರ್ಥ.

"ಇದಂ ಮಂತ್ರಂ ಪತ್ನೀ ಪಠೇತ್."
ಈಮಂತ್ರವನ್ನು ಪತ್ನಿಯು ಪಠಿಸಲಿ.ಅಥವಾ ಉಚ್ಛರಿಸಲಿ .ಎಂಬುದು ತಾತ್ಪರ್ಯ.
ಈ ವಿಚಾರಗಳನ್ನು ನೋಡಿದಾಗ ನಾವು ತಿಳಿದುಕೊಳ್ಳುವ ವಿಚಾರವಿದು. ವೇದಗಳ ಕಾಲದಲ್ಲಿ ಮಹಿಳೆಗೆ ಉನ್ನತ ಸ್ಥಾನ ಮಾನವಿತ್ತು ಎಂದು.ಇದಕ್ಕೆ ಉದಾಹರಣೆಯಾಗಿ ನಮ್ಮೆದುರು ಗಾರ್ಗಿ ,ಮೈತ್ರೇಯಿಯರು ನಿಲ್ಲುತ್ತಾರೆ.

ನಾನೀಗ ಹೇಳ ಹೊರಟಿರುವುದು ನಮ್ಮ ಸಮಾಜದಲ್ಲಿ  ಮಹಿಳೆಯ ಸ್ಥಾನ ಮಾನವೇನು ಎಂಬ ಬಗ್ಗೆ.

ನಮ್ಮ ಸಮಾಜದಲ್ಲಿ ಹೆಣ್ಣು ಕಣ್ಣಾಗಿದ್ದಾಳೆ.ತಾಯಿ,ಅತ್ತೆ,ಮಗಳು,ಸೊಸೆ,ನಾದಿನಿ,ಅತ್ತಿಗೆಯಾಗಿ ಆಕೆ ನಿರ್ವಹಿಸುವ ಪಾತ್ರಗಳು ಹಲವಾರು.
 ಬನ್ನಿ,ತಾಯಿಯಾಗಿ ನಮ್ಮ ಮಹಿಳೆ ಹೇಗೆ ಕರ್ತವ್ಯ ಮುಖಿಯಾಗಿದ್ದಾಳೆ ಎಂಬ ವಿಚಾರವನ್ನು ಹಂಚಿಕೊಳ್ಳೋಣ.

ಮನೆಯೆ ಮೊದಲ ಪಾಠ ಶಾಲೆ ಜನನಿ ತಾನೆ ಮೊದಲ ಗುರುವು ಜನನಿಯಿಂದ ಪಾಠ ಕಲಿತ ಜನರು ಧನ್ಯರು.

ಒಂಭತ್ತು ತಿಂಗಳು ಒಡಲಲ್ಲಿ ಒಲವನ್ನು ಹೊತ್ತು,ಕಷ್ಟವನು ಇಷ್ಟವಾಗಿಸಿಕೊಂಡು,ಬೆಟ್ಟದಷ್ಟು ನೋವನ್ನುಂಡು ಪ್ರೀತಿಯಿಂದ ಜೀವವೊಂದನ್ನು ಬುವಿಗೆ ತರುತ್ತಾಳೆ.

ಜನಿಸಿದ ಅಸಹಾಯಕ ಜೀವಕ್ಕೆ ತಾಯಿಯೇ ದೇವರು.ತಾಯಿಯೇ ಅನ್ನ, ಆಹಾರ.ಮನೆಯೆನ್ನುವ ಪಾಠ ಶಾಲೆಯಲ್ಲಿ ಬಿಂಬವೊಂದು ರೂಪುಗೊಳ್ಳುತ್ತದೆ.ತಾಯಿಯೇ ಗುರುವಾಗುತ್ತಾಳೆ.

ಇದಕ್ಕೇ  ಇರಬೇಕು ಬಲ್ಲಿದರು ಹೇಳುವುದು.
"ಕುಪುತ್ರೋ ಜ್ಯಾಯೇತ್ ಕ್ವಚಿದಪಿ ಕುಮಾತಾ ನ ಭವತಿ"

ಹುಟ್ಟಿದರೆ ಕೆಟ್ಟ ಸಂತಾನ ಹುಟ್ಟಬಹುದಂತೆ. ಆದರೆ ತಾಯಿ ಎಂದೂ ಕೆಟ್ಟವಳು ಆಗಲಾರಳಂತೆ.
ಅಕ್ಷರಶಃ ಸತ್ಯ ಈ ಮಾತು.ಇದಕ್ಕೆ ಪುಷ್ಟಿ ಕೊಡುವ ಸಾಕಷ್ಟು ಪುರಾಣ ಪುಣ್ಯ ಕಥೆಗಳು ನಮ್ಮ ನಿಮ್ಮಗಳ ಕಣ್ಣೆದುರು ಇವೆ.  


 "ಹೆಣ್ಣೊಬ್ಬಳು ಕಲಿತರೆ ಶಾಲೆಯೊಂದು ತೆರೆದಂತೆ"

ಪ್ರಸಿದ್ದ ದಾರ್ಶನಿಕ ಮೈಕೈವರ್ ಮೇಲಿನ ಮಾತನ್ನು ಹೇಳುತ್ತಾನೆ. ಹೌದು ತಾಯಿ ಸುಶಿಕ್ಷಿತೆಯದರಷ್ಟೇ ಮನೆಯಲ್ಲಿ ಸುಶಿಕ್ಷಿತ ವಾತಾವರಣ ಸಿಗಬಹುದು.
ಜನಿಸಿದ ಮಕ್ಕಳು ಮೊದಲು ಕಾಣುವುದು, ಅನುಸರಿಸುವುದು ,ಅನುಕರಿಸುವುದು ತಾಯಿಯನ್ನೇ .ಅದಕ್ಕೇ ಮಕ್ಕಳ ಸ್ವಭಾವ ,ವರ್ತನೆ ಎಲ್ಲವೂ ಕೆಟ್ಟದ್ದಾಗಲಿ ಒಳ್ಳೆದೇ ಇರಲಿಬರುವ ಮಾತು ಹೀಗೆಯೇ. "ತಾಯಿಯಂತೆ ಮಗಳು ನೂಲಿನಂತೆ ಸೀರೆ"


"ತೊಟ್ಟಿಲಿನಿಂದ ಚಟ್ಟದವರೆಗೆ"
ಎನ್ನುವ ನಾಣ್ಣುಡಿ.ಹುಟ್ಟಿದ ಮಗುವೊಂದು ಬಾಲ್ಯದಲ್ಲಿ ಏನನ್ನು ಕಲಿಯುತ್ತದೋ ಅದು ಅದರ ಮಸ್ತಿಷ್ಕದಲ್ಲಿ ಮನೆ ಮಾಡುತ್ತದೆ.ಆದ್ದರಿಂದಲೇ ಮಗುವಿಗೆ ತಾಯಿ ಒಳ್ಳೆಯವಳಾದರೆ ಅತ್ಯುತ್ತಮ.


"ಜನ್ಮಣಾ ಜಾಯತೇ ಜಂತುಃ 
ಕರ್ಮಣಾ ಜಾಯತೇ ದ್ವಿಜಃ
ವೇದಾಧ್ಯಯನತೋ ವಿಪ್ರಃ
ಬ್ರಹ್ಮ ವಿ ಬ್ರಾಹ್ಮಣ ಸ್ಮೃತಃ"


ಒಂದು ಜೀವ ಭೂಮಿಯಲ್ಲಿ ಜನ್ಮ ಎತ್ತಿದಾ ಕ್ಷಣ  ಕೇವಲ ಉಸಿರಾಡುವ ಮಾಂಸದ ಬರೀ ಮುದ್ದೆಯಷ್ಟೆ. ಕಾಲ ಕ್ರಮೇಣವಾಗಿ ಆ ಮಗು ತಾಯಿಯ ಪ್ರೀತಿಯ ಆರೈಕೆಯಲ್ಲಿ ಹೊಸ ಸಂಚಲನ ಪಡೆದುಕೊಳ್ಳುತ್ತದೆ .ಮಲ ಮೂತ್ರದ ಕೂಪದಲ್ಲಿ ಉರುಳಾತ್ತಿರುವ ಆ ಜೀವವನ್ನು "ತಾಯಿ" ಎಂಬ ದೇವತೆ ಕ್ಷಣ ಕ್ಷಣದ ಸಂಸ್ಕಾರದ ಮೂಲಕ ಉಸಿರು ತುಂಬುತ್ತಾ ಜೀವದ, ಜೀವನದ ಹಸಿರಾಗುತ್ತಾಳೆ.
ಬಾಳ ಜ್ಯೋತಿಯನ್ನು ಉರಿಸುತ್ತಾಳೆ.ತನ್ಮೂಲಕ ಜೀವಕ್ಕೆ ಮಾನವನ ರೂಪ ನೀಡುತ್ತಾಳೆ.

ಸಂಸ್ಕಾರವನ್ನು ಪಡೆಯುತ್ತಾ ವೇದಾಧ್ಯಯನವನ್ನು ಮಾಡಿ ವಿಪ್ರನಾಗುತ್ತಾನೆ.ಬ್ರಹ್ಮ ಜ್ಜಾನವನ್ನು ಪಡೆದು ಬ್ರಾಹ್ಮಣನಾಗುತ್ತಾನೆ.

ಯೋಚಿಸಿ ಕವಿಮನಗಳೇ ಎಳೆಯ,ಆ ಅಸಹಾಯ ಕಂದಮ್ಮಗಳು ನಾವೇ ಅಲ್ಲವೇ ನಮ್ಮತಾಯಿ ತಾನೇ ನಮ್ಮನ್ನು ಈ ಸುಂದರ ಜಾಗದಲ್ಲಿ ಕೂರಿಸಿದ್ದು.ಅದಕ್ಕೆ ತಾಯಿಯನ್ನು "ಕ್ಷಮಯಾ ಧರಿತ್ರೀ ಎನ್ನುವುದು ಅಲ್ಲವೇ?


 *ಸಭ್ಯತೆ,ಸಂಸ್ಕೃತಿಯ ಹರಿಕಾರನಾಗಿ ತಾಯಿ.*

ಒಬ್ಬ ಯಶಸ್ವೀ ವ್ಯಕ್ತಿಯ ಹಿಂದೆ ತಾಯಿ ಇರುತ್ತಾಳೆ ಎಂಬ ಮಾತು ಸತ್ಯ.ಒಂದು ಭವ್ಯ ಕಟ್ಟಡ ದೃಢವಾಗಿ ನಿಲ್ಲ ಬೇಕಾದರೆ,ಭದ್ರ ಬುನಾದಿಯು,ಒಂದು ಗಿಡ ಬೆಳೆದು ಹೆಮ್ಮರವಾಗಲು ತಾಯಿ ಬೇರು ಹೇಗೆ ಪ್ರಾಮುಖ್ಯವೋ ಹಾಗೆಯೇ ಜೀವವೊಂದು ಉಜ್ವಲ ಭವಿಷ್ಯ ಕಾಣಲು,ದೇದೀಪ್ಯಮಾನವಾಗಿ ಬೆಳಗಲು ತಾಯಿಯೇ ಭದ್ರ ಬುನಾದಿ.


ಬೆಳಗ್ಗೆ ಏಳುತ್ತಿದ್ದ ಹಾಗೇ "ಕರಾಗ್ರೇ ವಸತೇ ಲಕ್ಷ್ಮೀಕರಮಧ್ಯೇ ಸರಸ್ವತಿ ಕರಮೂಲೇ ಸ್ಥಿತೋಗೌರಿ ಪ್ರಭಾತೇ ಕರದರ್ಶನಂ"


ಸಮುದ್ರ ವಸನೇದೇವಿ ಪರ್ವತ ಸ್ಥನ ಮಂಡಲೇ ವಿಷ್ಣು ಪತ್ನಿನಮಸ್ತುಭ್ಯಂ ಪಾದಸ್ಪರ್ಶಂ ಕ್ಷಮಸ್ವಮೇ."


ನಮ್ಮ ಅಮೃತ ಹಸ್ತಗಳಲ್ಲೇ ದೇವಾನು ದೇವತೆಗಳನ್ನು ಕಾಣುವ ನಮ್ಮಭವ್ಯ ಪರಂಪರೆ,ಸಭ್ಯ ಸಂಸ್ಕೃತಿ .ಮೆಟ್ಟುವ ಮೊದಲು ಭೂಮಿಯಲ್ಲೂ ಕ್ಷಮೆ ಕೇಳುವ ಹಿರಿಯ ಆದರೆ ಸರಳ ಶ್ರೇಷ್ಟ ಗುಣ.ಇವುಗಳನ್ನೆಲ್ಲಾ ತಾಯಿ ಕಲಿಸದಿದ್ದರೆ ಇನ್ನಾರು ಕಲಿಸುತ್ತಾರೆ..ಅದಕ್ಕೇ ಜನನಿ ಮೊದಲ ಗುರು.

ಹೆಜ್ಜೆ ಹೆಜ್ಜೆಗೆ ಸಂಪ್ರದಾಯ ,ಸಭ್ಯತೆ,ಸಂಸ್ಕೃತಿಯ ಬಗ್ಗೆ ತಿದ್ದಿ ತೀಡುವತಾಯಿಯ ಪ್ರಾಮುಖ್ಯತೆಯ ಅರಿವು ಎಂದು ಆಗುವುದೋ.....

ಇಂಥಾ ತಾಯಿಯನ್ನೂವೃದ್ಧಾಶ್ರಮಕ್ಕೆ ತಳ್ಳುವವರಿಲ್ಲವೇ??!!
ಅವರ ಆಸ್ತಿಯನ್ನು ವಂಚನೆಯಿಂದ ಲಪಟಾಯಿಸಿ ಬೀದಿ ಪಾಲು ಮಾಡುವುದಿಲ್ಲವೇ??!!ಏಕೆ ಹೀಗೆ  ??
ನಮ್ಮ ಸಮಾಜದಲ್ಲಿಪರಿವರ್ತನೆ ಅಸಾಧ್ಯವೇ??ನಾವು ನೈತಿಕ ಅಧಃಪತನದತ್ತ ಸಾಗುತ್ತಿದ್ದೇವೆಯೇ ??ನಮ್ಮನ್ನು ನಾವು ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಸಮಯವಿದು ಅಲ್ಲವೇ?!
ತಾಯಿಯಾಗಿ ಕರ್ತವ್ಯ ನಿರ್ವಹಿಸುವಲ್ಲಿ ಏನು ಕೊರತೆ,ಹಿನ್ನಡೆ ಹಾಗೂ ಎಡವುತ್ತಿದ್ದೇವೆ  ಎಂಬ ಬಗ್ಗೆ ಅವಲೋಕನ ಮಾಡಬೇಕಾಗಿದೆ ಯೇ?? ತಾಯಿಯಾದವಳು ಮಗು ಗಂಡಾಗಲಿ ಹೆಣ್ಣಾಗಲಿ ಸಮಾನವಾಗಿ ಕಂಡು ಸರಿಯಾದ ರೀತಿಯಲ್ಲಿ ನೈತಿಕತೆಯ ಪಾಠ ನೀಡಬೇಕಾಗಿದೆಯೇ??ತನ್ಮೂಲಕ ನೈತಿಕ ಅಧಃಪತನದತ್ತ ಸಾಗುತ್ತಿರುವ ಒಂದು ಯುವ ಸಮೂಹಕ್ಕೆ ಮಾರ್ಗದರ್ಶನ  ನೀಡುವತ್ತ ಗಮನ ಹರಿಸಬೇಕಾಗಿದೆಯೆ??!

 ಹೆಣ್ಣು ತಾಯಿಯ ರೂಪದಲ್ಲಿ, ಗುರುವಾಗಿ,ಸಭ್ಯತೆ, ಸಂಸ್ಕೃತಿಯ  ಹರಿಕಾರನಾಗಿ,ಭವಿಷ್ಯ ರೂಪಿಸುವಲ್ಲಿ,ಭವ್ಯ ಸಮಾಜ ನಿರ್ಮಾಣದಲ್ಲಿ ಸಮರ್ಥವಾಗಿ ತನ್ನ ಕರ್ತವ್ಯವನ್ನು ನಿರ್ವಹಿಸುತ್ತಿದ್ದಾಳೆಯೇ ?ಅಂಥಾ ತಾಯಿಗೆ ಒಂದು ಹಿಡಿಯಷ್ಟು ಪ್ರೀತಿಯನ್ನು ಮನಸಾರೆ ಹಂಚೋಣವೇ???!!!ತಾಯಿಗೆ ಪ್ರೀತಿಯನ್ನು ನೀಡಲು ಹೇಳುವ ಸಮಯ ಬಂತೆಂದರೆ ಎಂಥಾ ವಿಚಿತ್ರವಲ್ಲವೇ??    ಅಲ್ಲವೇ ಪ್ರೀತಿ ಎನ್ನುವುದು ವ್ಯಾಪಾರದ ಸರಕಾಗಿರುವುದು ವಿಪರ್ಯಾಸವಲ್ಲವೇ? 

ಅತಿ ಶೀಘ್ರವಾಗಿ ಎಚ್ಚೆತ್ತುಕೊಂಡು ಕಲಿತು  ಕಲಿಸುತ್ತಾ,ಬೆಳೆದು ಬೆಳೆಸುತ್ತಾ ಬದುಕಿ ಬಾಳೋಣ ಎನ್ನುತ್ತಾ  ವಿರಮಿಸುವೆ.


  *"ಉಪ್ಪಿಗಿಂತ ರುಚಿಯಿಲ್ಲ; ತಾಯಿಗಿಂತ ಬಂಧುವಿಲ್ಲ."*