ಅವತಾರವಾಣಿ
ಸುಂದರವಾದ ಪುಷ್ಯಮಾಸ ಮೊಡಗಳೆಲ್ಲಾ ಸರಿದು ಹೋಗಿ ಸೂರ್ಯ ದೇವನು ಸುಂದರವಾಗಿ ಶೋಬಿಸುತಿದ್ದಾನೆ. ಧೀರ್ಗವಾಗಿದ್ದ ಹಗಲು ಗಿಡ್ದವಾಗಿದೆ. ಗಿಡ್ದವಾಗಿದ್ದ ರಾತ್ರಿ ಉದ್ದವಾಗಿದೆ. ಚಳಿಗಾಲದ ತಂಪಾದ ಗಾಳಿ ಚುರುಕಾಗಿ ಬೀಸುತ್ತಿದೆ. ಗಿಡಗಳ ಮೇಲೆ ಹೂಗಳು ಸುಂದರವಾಗಿ ಅರಳಿ ನಿಂತಿವೆ. ರಾತ್ರಿಯ ಬೆಳದಿಂಗಳ ಮೇಲೆ ರೈತರು ತಮ್ಮ ಹೊಲಗಳಲ್ಲಿ ಗಟ್ಟಿಯಾಗಿ ಹಾಡುತ್ತ ತೆನೆ ತುಂಬಿದ ತಮ್ಮ ಪೈರುಗಳನ್ನು ಕಾಯುತ್ತಿದ್ದಾರೆ.ಮನೆಗಳಲ್ಲಿಯೂ ಧಾನ್ಯವು ರಾಶಿ ರಾಶಿಯಾಗಿ ಸಂಗ್ರಹವಾಗುತ್ತಿದೆ. ಇಂತಹ ನಯನ ಮನೋಹರವಾದ ವಾತಾವರಣದಲ್ಲಿ ರಸಿಕರನ್ನು ರಂಜಿಸಲು ಸಂಕ್ರಾಂತಿ ಹಬ್ಬವು ಬಂದಿದೆ.
ಅವತಾರವಾಣಿ |
ತಿಲ ಮದ್ಯೇ ಯಥಾ ತೈಲಂ
ಕ್ಷಿರಮದ್ಯೇ ಯಥಾ ಘ್ರುಂತಂ
ಪುಷ್ಪಮದ್ಯೇ ಯಥಾ ಗಂಧಂ
ಫಲಮದ್ಯೇ ಯಥಾ ರಸಂ
ಕಾಷ್ಟಾಗ್ನಿವತ್ ಪ್ರಕಾಶೇನ
ತಲ್ಲಿಂಗಂ ಯ್ಹ ಚರಂಪ್ರಬೋ //
ಎಳ್ಳಿನಲ್ಲಿ ಎಣ್ಣೆಯಾಗಿ, ಹಾಲಿನಲ್ಲಿ ಬೆಣ್ಣೆಯಾಗಿ, ಹೂವಿನಲ್ಲಿ ಪರಿಮಳವಾಗಿ, ಹಣ್ಣಿನಲ್ಲಿ ರಸವಾಗಿ,
ಸೌದೆಯಲ್ಲಿ ಬೆಂಕಿಯಾಗಿ, ಕಣ್ಣಿನಲ್ಲಿ ದೃಷ್ಟಿಯಾಗಿ, ಕಿವಿಯಲ್ಲಿ ಶಬ್ದವಾಗಿ, ನಾಲಿಗೆಯಲ್ಲಿ ರುಚಿಯಾಗಿ ಇರುವ ಭಗವಂತನು, ಸರ್ವ ಪ್ರಾಣಿಗಳಿಗೂ ಚೈತನ್ಯದಯಕನಾಗಿದ್ದಾನೆ. ರತ್ನಹಾರದೊಳಗಿನ ದಾರವು ಕಾಣದಂತೆ, ವಿಶ್ವೆಶ್ವರನು ವಿಶ್ವದಲ್ಲೆಡೆ ವ್ಯಾಪಿಸಿಕೊಂಡಿದ್ದು ಕಾಣದಂತೆ ಇರುತ್ತಾನೆ.